ಮಾಹಿತಿ ತಂತ್ರಜ್ಞಾನ ಕುರಿತು ಡಾ. ಯು. ಬಿ. ಪವನಜ ಉಪನ್ಯಾಸ

ಸ್ಥಳ : ಸುರುಚಿ ರಂಗಮನೆ, ಕುವೆಂಪುನಗರ, ಮೈಸೂರು
ಸಮಯ : ಬೆಳಿಗ್ಗೆ, 10.30ಕ್ಕೆ
ಡಾ. ಪವನಜ ಕನ್ನಡ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ಶ್ರೇಣಿಯಲ್ಲಿನ ಹೆಸರು. ಸುಮಾರು ಹದಿನೈದಕ್ಕೂ ಹೆಚ್ಚು ವರ್ಷಗಳಿಂದ ಕನ್ನಡವನ್ನು ಕಂಪ್ಯೂಟರ್ ಗೆ ಅಳವಡಿಸುವ ಬಗ್ಗೆ ಬಹಳಷ್ಟು ಕೆಲಸ ಮಾಡಿದ್ದಾರೆ.
ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ "ನುಡಿ" ತಂತ್ರಾಂಶದ ಬೆಳವಣಿಗೆಯಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ. ಮೈಕ್ರೋಸಾಫ್ಟ್ ಅವರನ್ನು "ಮೋಸ್ಟ್ ವಾಲ್ಯೂಡ್ ಪ್ರೊಫೆಷನಲ್" ಎಂದು ಗುರುತಿಸಿದೆ.
ಕರ್ನಾಟಕ ಮತ್ತು ಕೇರಳದ ಗಡಿ ಭಾಗದಲ್ಲಿ ಜನಿಸಿದ ಪವನಜ ರವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ. ಪದವಿಯನ್ನು, ಬಾಂಬೆ ವಿ.ವಿ.ಯಿಂದ ಪಿ.ಎಚ್.ಡಿ. ಪದವಿಯನ್ನೂ ಪಡೆದಿದ್ದು, ಮುಂಬೈನ ಭಾಭಾ ಆಣು ವಿಜ್ಞಾನ ಕೇಂದ್ರದಲ್ಲಿ ಬಹಳಷ್ಟು ವರ್ಷ ಕೆಲಸ ಮಾಡಿದ್ದರು. ಇದೀಗ ಮೈಸೂರಿನ ಎಕ್ಸೆಲ್ ಸಾಫ್ಟ್ ನಲ್ಲಿ ಉದ್ಯೋಗಿ. ಕನ್ನಡ ಎಂದರೆ ಪಂಚಪ್ರಾಣ.












Click it and Unblock the Notifications