ಶ್ರೀ ರವಿಶಂಕರ ಗುರೂಜಿಯಿಂದ ಗಡ್ಡ ಬೋಳಿಸುವ ಸವಾಲು
ಬೆಂಗಳೂರು,
ಆಗಸ್ಟ್ 27: ಆರ್ಟ್ ಆಫ್ ಲಿವಿಂಗ್ ಕೇಂದ್ರದ ಶ್ರೀ ರವಿಶಂಕರ ಗುರೂಜಿ ಅವರು 'ಅಣ್ಣಾ ಹಜಾರೆಯ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ತಾವು 10 ಕೋಟಿ ರೂ. ಕೊಟ್ಟಿದ್ದು ಸಾಬೀತುಪಡಿಸಿದರೆ ಗಡ್ಡ ಬೋಳಿಸುವುದಾಗಿ' ಸವಾಲು ಹಾಕಿದ್ದಾರೆ. id="toptextpromo">'ಮಾಜಿ
ಸಿಎಂ ಕುಮಾರಸ್ವಾಮಿ ತಾವು ಅಣ್ಣಾ ಹೋರಾಟಕ್ಕೆ 10 ಕೋಟಿ ಹಣ ಕೊಟ್ಟಿರುವುದಾಗಿ ಹೇಳಿರುವುದು ನಿರಾಧಾರ. ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು. ನಾನು ಯಾರಿಗೂ ದುಡ್ಡು ಕೊಟ್ಟಿಲ್ಲ. ಒಂದುವೇಳೆ, ಅಣ್ಣಾ ಹೋರಾಟಕ್ಕೆ 10 ಕೋಟಿ ಕೊಟ್ಟಿರುವುದನ್ನು ಕುಮಾರಸ್ವಾಮಿ ಸಾಬೀತು ಮಾಡುವುದಾದರೆ ಗಡ್ಡ ಬೋಳಿಸುವುದಾಗಿ' ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಜನ ಲೋಕಪಾಲ ಮಸೂದೆ ಜಾರಿ ಹೋರಾಟದಲ್ಲಿ ಶುಕ್ರವಾರ ತಿಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಣ್ಣಾ
ಹಜಾರೆ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಶ್ರೀ ರವಿಶಂಕರ್ ಗುರೂಜಿ 10 ಕೋಟಿ ರೂ. ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಇತ್ತೀಚೆಗೆ ಆರೋಪಿಸಿದ್ದರು.











Click it and Unblock the Notifications