ಭೂಗತ ದೊರೆ ಬನ್ನಂಜೆ ರಾಜನ ಸಹಚರರ ಬಂಧನ
ಮಂಗಳೂರು,
ಆ. 26 : ಮಂಗಳೂರು ಮತ್ತು ಉಡುಪಿಯಲ್ಲಿ ನಡೆದ ಎರಡು ಶೂಟೌಟ್ ಘಟನೆಗಳಿಗೆ ಸಂಬಂಧಿಸಿದಂತೆ ಭೂಗತ ಜಗತ್ತಿನ ಡಾನ್ ಬನ್ನಂಜೆ ರಾಜನ ಸಹಚರರೆನ್ನಲಾದ ಏಳು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಲ್ಲಿ ನಾಲ್ಕು ಮಂದಿ ಬನ್ನಂಜೆ ರಾಜನ ನಿಕಟವರ್ತಿಗಳಾಗಿದ್ದು ಉಳಿದ ಮೂರು ಮಂದಿ ಇವರಿಗೆ ಸಹಕರಿದವರೆಂದು ಪೊಲೀಸ್ ಮೂಲಗಳು ತಿಳಿಸಿವೆ. id="toptextpromo">ಕಳೆದ
ಮೇ ತಿಂಗಳಲ್ಲಿ ಮಂಗಳೂರಲ್ಲಿ ಬೈಕಿನಲ್ಲಿ ಬಂದಿದ್ದ ಆಗಂತುಕರು ಸುರೇಶ್ ಭಂಡಾರಿ ಅವರನ್ನು ಹತ್ಯೆ ಮಾಡುವ ಯತ್ನ ನಡೆಸಿದ್ದರು. ಆಗಸ್ಟ್ 19ರಂದು ಉಡುಪಿ ಐರೋಡಿ ಚಿನ್ನಾಭರಣ ಮಳಿಗೆಗೆ ಗುಂಡು ಹಾರಿಸಿ ಭೀತಿ ಉಂಟು ಮಾಡಿದ್ದರು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ತಂಡ ಮಂಗಳೂರಿನ ಕೊಟ್ಟಾರ ಚೌಕಿಗೆ ಹಪ್ತಾ ವಸೂಲಿಗೆ ಬರುವುದೆಂಬ ಖಚಿತ ಮಾಹಿತಿ ಪಡೆದ ಪೊಲೀಸ್ ತಂಡ ಕಾರ್ಯಾಚರಣೆಗಿಳಿದು ಆರೋಪಿಗಳನ್ನು ಬಂಧಿಸಿತು. ಬಂಧಿತರು ಕೊಟ್ಟಾರದ ದೇವದಾಸ್ ಶೆಟ್ಟಿ, ನೀರಜ್ ಶ್ರೀವಾತ್ಸವ್ ಉತ್ತರ ಪ್ರದೇಶ, ಅಲಿ ಹುಸೈನ್ ಘೋರಕ್ ಪುರ್, ವಿನೋದ್ ಕುಲಾಲ್ ಜಲ್ಲಿಗುಡ್ಡೆ, ಅಮಿತ್ ಚೌರಾಸಿಯಾ ಬಿಹಾರ್, ರೆಹೇಜ್ ಖಾನ್ ಬಿಹಾರ್ ಮತ್ತು ಪುಟ್ಟಸ್ವಾಮಿ ಮೈಸೂರು. ಬಂಧಿತರಿಂದ ಪಿಸ್ತೂಲ್, 5 ಬುಲೆಟ್ ಹಾಗೂ ಇಂಡಿಕಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.











Click it and Unblock the Notifications