ಶೋಭಾ ಕೈ ತಪ್ಪಿದ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹೊಣೆ

ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಜಿಲ್ಲಾ ಉಸ್ತುವಾರಿಯನ್ನು ಬಸವರಾಜ ಬೊಮ್ಮಾಯಿ ಅವರಿಂದ ಹಿಂಪಡೆದು ಮುಖ್ಯಮಂತ್ರಿ ಸದಾನಂದ ಗೌಡರೇ ವಹಿಸಿಕೊಂಡಿದ್ದಾರೆ.
ಯಡಿಯೂರಪ್ಪ ಅವರ ಕಾಲದಿಂದಲೂ ಜಿಲ್ಲಾ ಉಸ್ತುವಾರಿಗೆ ನಾ ಒಲ್ಲೆ ಎನ್ನುತ್ತಿದ್ದ ಶೋಭಾ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿಲ್ಲ. ತುಮಕೂರು, ಮೈಸೂರು ನಂತರ ಶೋಭಾ ಕರಂದ್ಲಾಜೆ ಅವರು ಹಿಂದುಳಿದ ಜಿಲ್ಲೆ ಚಿತ್ರದುರ್ಗದ ಉಸ್ತುವಾರಿ ವಹಿಸಲಾಗಿತ್ತು. ಆದರೆ, ಶೋಭಾ ಅವರು ಉಸ್ತುವಾರಿ ಉಸಾಬರಿ ಬೇಡವೆನ್ನಲು ಸರಿಯಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. [ಸಚಿವರ ಖಾತೆ ವಿವರ ನೋಡಿ]
ಜಿಲ್ಲಾ ಉಸ್ತುವಾರಿ ನೇಮಕದಲ್ಲಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಸೇರಿದಂತೆ ಶೆಟ್ಟರ್ ಬಣದ ನಾಯಕರು ಕೈಯಾಡಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಚಿತ್ರದುರ್ಗಕ್ಕೆ ಆನಂದ ಅಸ್ನೋಟಿಕರ್, ಗುಲ್ಬರ್ಗಕ್ಕೆ ಬಸವರಾಜ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಗೆ ಬಿಜಾಪುರದ ಜೊತೆಗೆ ತುಮಕೂರು ಜಿಲ್ಲೆಯ ಹೊಣೆಯನ್ನು ವಹಿಸಲಾಗಿದೆ. ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗೆ ಬಾಲಚಂದ್ರ ಜಾರಕಿಹೊಳಿ ಉಸ್ತುವಾರಿ ಸಚಿವರಾಗಿದ್ದಾರೆ ಉಳಿದಂತೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಆಗಿಲ್ಲ. [ಸಂಪೂರ್ಣ ಪಟ್ಟಿ ನೋಡಿ]












Click it and Unblock the Notifications