ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ಮೈಸೂರು ಮೃಗಾಲಯಕ್ಕೆ ಹಸಿರು ಅನಕೊಂಡ

|
Google Oneindia Kannada News

anakonda
ಮೈಸೂರು, ಆ. 26: ಶತಮಾನಗಳಿಗಿಂತ ಹಳೆಯದಾದ ಸುಪ್ರಸಿದ್ಧ ಮೈಸೂರು ಝೂ ಈಗ ಮತ್ತೊಮ್ಮೆ ಸುದ್ದಿಯಾಗಲಿದೆ. ಕಾರಣ ಇಲ್ಲಿಗೆ ಶ್ರೀಲಂಕಾದಿಂದ ಬರಲಿರುವ ದೈತ್ಯ ಹಸಿರು ಅನಕೊಂಡ ಹಾವು (Eunectes Murinus).

ಸುಮಾರು 8ರಿಂದ 9 ಅಡಿ ಉದ್ದವಿರುವ 2 ಗಂಡು ಹಾಗೂ 3 ಹೆಣ್ಣು ಅನಕೊಂಡಗಳು, ಭಾರತದ ಸೆಂಟ್ರಲ್ ಝೂ ಅಥಾರಿಟಿ ಒಪ್ಪಿಗೆಯ ಮೇರೆಗೆ ಶ್ರೀಲಂಕಾದಿಂದ ಸದ್ಯದಲ್ಲಿಯೇ ಮೈಸೂರು ಪ್ರವೇಶೀಸಲಿದೆ. ಜಗತ್ತಿನ ಅತಿ ದೈತ್ಯ ಸರಿಸೃಪ ಎನಿಸಿರುವ ಇದನ್ನು ನೋಡಲು ಪ್ರವಾಸಿಗರು ಮುಗಿಬೀಳುವುದು ಗ್ಯಾರಂಟಿ ಎನ್ನಲಾಗಿದ್ದು ಇದು ಝೂ ನ ಪ್ರಮುಖ ಆಕರ್ಷಣೆಯಾಗಲಿದೆ.

ಶ್ರೀಲಂಕಾದಿಂದ ಸದ್ಯದಲ್ಲೇ ಅನಕೊಂಡ ಹಾವುಗಳ ಆಗಮನವಾಗಲಿದ್ದು ಈ ಸಂಬಂಧ ನಡೆಯಬೇಕಾಗಿರುವ ಔಪಚಾರಿಕ ಮಾತುಕತೆ ನಡೆದಿದೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ಹಾಗೂ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.

ಸಾಮಾನ್ಯ ಹಾಗೂ ಹಸಿರು ಬಣ್ಣದ ಅನಕೊಂಡ 16 ರಿಂದ 23 ಅಡಿ ಉದ್ದವಿರುವುದರ ಜೊತೆಗೆ ಸಾಕಷ್ಟು ದಪ್ಪವೂ ಇದ್ದು ಅತಿ ದೈತ್ಯ ಆಕಾರ ಹೊಂದಿರುವ ಭೂಮಿಯ ಮೇಲಿನ ಅತಿ ದೊಡ್ಡ ಸರಿಸೃಪವಾಗಿದೆ.

ಮೈಸೂರು ದಸರಾಗೆ ಏಳೂವರೆ ಸಾವಿರ ಕೆಂಪು ಬಸ್

English summary
The century-old Mysore Zoo known for its captive breeding and housing rare species will soon have mighty green anacondas (Eunectes Murinus) as the National Zoological Gardens, Dehiwala, (also known as Colombo Zoo) in Sri Lanka is 'gifting' the reptiles to the zoo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X