ಸರ್ಕಾರ ಬಿದ್ದರೂ ಪರವಾಗಿಲ್ಲ ರೆಡ್ಡಿಗಳಿಗೆ ಸೊಪ್ಪು ಹಾಕಲ್ಲ
ಬಳ್ಳಾರಿ,
ಆಗಸ್ಟ್ 24: ಆದರೆ, ರೆಡ್ಡಿ ಬಣದ ಈ ಯಾವ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಪಕ್ಷ ಸ್ಪಷ್ಟ ಸಂದೇಶ ನೀಡಿದೆ. ಸರ್ಕಾರ ಬಿದ್ದರೂ ಪರವಾಗಿಲ್ಲ, ಲೋಕಾಯುಕ್ತ ವರದಿಯಲ್ಲಿ ದೋಷಾರೋಪಕ್ಕೆ ಒಳಗಾದವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಿಜೆಪಿ ಬಂದಿದೆ. id="toptextpromo">ರೆಡ್ಡಿಗಳ
ಉಪಟಳದಿಂದ ರಾಜ್ಯ ಸರ್ಕಾರ ಬಿದ್ದರೆ ಅದೇ ಬಿಜೆಪಿಯ ಮುಂದಿನ ಚುನಾವಣಾ ವಿಷಯವಾಗಲಿದೆ. ಈಗಿನ ಎಲ್ಲ ಹಗರಣಗಳೂ ಮರೆಯಾಗಿ ರೆಡ್ಡಿಗಳ ಮೇಲಾಟವನ್ನೇ ಜನರಿಗೆ ತಿಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ಗೊತ್ತಾಗಿದೆ. id='are-slot-1' class='oiad oi-axt oiadv'> id='top-searched-articles'>ರಾಷ್ಟ್ರಪತಿ
ಆಡಳಿತ ಬಂದರೆ ಗಣಿಧಣಿಗಳ ಗತಿ ಏನಾಗುತ್ತದೆ ಎಂಬುದು ಅವರಿಗೇ (ರೆಡ್ಡಿ ಬಣಕ್ಕೆ) ಚೆನ್ನಾಗಿ ಗೊತ್ತಿದೆ. ಹೀಗಾಗಿ ಯಾವ ಒತ್ತಡಕ್ಕೂ ಮಣಿಯಬಾರದು ಎಂಬುದು ಪಕ್ಷದ ದೃಢ ನಿಲುವಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.











Click it and Unblock the Notifications