ಬೋ*ಮಗನೆ ನಾನ್ ಮಿನಿಸ್ಟರ್, ಏನೋ ಮಾಡ್ಕೊತೀಯಾ

" ಏ.. ಬೋ*ಮಗನೆ.. ನಾನ್ ಮಿನಿಸ್ಟರ್ ಎಲ್ಲಿ ಬೇಕಾದರೂ ಪಾರ್ಕ್ ಮಾಡುತ್ತೇನೆ, ಅದನ್ನೆಲ್ಲಾ ಕೇಳೋಕೆ ನೀನು ಯಾರು, ಇಲ್ಲೇ ಗಾಡಿ ಪಾರ್ಕ್ ಮಾಡುತ್ತನೆ, ಏನೋ ಮಾಡ್ಕೊತೀಯಾ ಮಾಡ್ಕೋ" ಎಂದು ಅವಾಚ್ಯ ಪದಗಳಿಂದ ಸಚಿವರು ತರಾಟೆಗೆ ತೆಗೆದುಕೊಂಡಿದ್ದು ಟಿವಿ 9 ಸುದ್ದಿ ವಾಹಿನಿ ಬಿತ್ತರಿಸಿದೆ.
ಬಹುಷಃ ಮದ್ಯದ ಅಮಲಿನಲ್ಲಿ ಇದ್ದ ಜನಪ್ರತಿನಿಧಿ ಕತ್ತಿ ಸಾಹೇಬ್ರು, ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ರಹಿತ ಪ್ರದೇಶದಲ್ಲಿ ತಮ್ಮ ಮತ್ತು ಬೆಂಗಾವಲಿನ ಕಾರ್ ಅನ್ನು ಪಾರ್ಕ್ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಸೌಜನ್ಯದಿಂದ ಇಲ್ಲಿ ಪಾರ್ಕ್ ಮಾಡಬೇಡಿ ಎಂದಿದ್ದಾರೆ. ಮೇಲಿನ ಅವಾಚ್ಯ ಶಬ್ದ ಬಳಸಿದ ಮೇಲೂ ಪೊಲೀಸರು ಎಲ್ಲರಿಗೂ ಒಂದೇ ನಿಯಮ ದಯವಿಟ್ಟು ನಿಗದಿತ ಪ್ರದೇಶದಲ್ಲೇ ನಿಮ್ಮ ಕಾರನ್ನು ನಿಲ್ಲಿಸಿ ಎಂದಾಗ ಸಿಟ್ಟಿಗೆದ್ದ ಸಚಿವರು ಪೋಲೀಸರ ಕಾಲರ್ ಪಟ್ಟಿ ಹಿಡಿದು ಎಳೆದಾಡಿದ್ದಾರೆ.
ಸ್ಥಳಕ್ಕೆ ಬಂದ ಹಿರಿಯ ರೈಲ್ವೆ ಪೋಲೀಸ್ ಅಧಿಕಾರಿಗಳನ್ನು ಲೆಕ್ಕಿಸಿದೆ ಸಚಿವರು ಅನಾಗರಿಕ ವರ್ತನೆ ತೋರಿದ್ದಾರೆ. ಇನ್ನೂ ಅವಾಚ್ಯ ಪದಗಳನ್ನು ಬಳಸುತ್ತಲೇ ಇದ್ದ ಸಚಿವರನ್ನು ಪೊಲೀಸರು ಹೇಗೋ ಸಾಗ ಹಾಕಿದ್ದಾರೆ.
ಕಾನೂನು ಎಂದ ಮೇಲೆ ಎಲ್ಲರಿಗೂ ಒಂದೇ, ಸಚಿವರಾದರೇನು ಜನಸಾಮಾನ್ಯರಾದರೇನು ಎಂದು ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿದ್ದ ಈ ಪುಕ್ಸಟೆ ದೊಂಬರಾಟವನ್ನು ನೋಡಿ ಜನರು ಮಾತನಾಡುತ್ತಿದ್ದರು.












Click it and Unblock the Notifications