ಏಟಿಗೆ ಎದಿರೇಟು: ಜಗನ್ ಬಣದ ರಾಜೀನಾಮೆ ಆಸ್ತ್ರ

YS Jagan Mohan Reddy
ಹೈದರಾಬಾದ್, ಆ. 22: ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಬೆಂಬಲಿತ 28 ಶಾಸಕರು ಹಾಗೂ 2 ಸಂಸದರು ತಮ್ಮ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದನ್ನು ದೃಢಪಡಿಸಿದ್ದಾರೆ. ಭಾನುವಾರ ಘೋಷಿಸಿದಂತೆ ಜಗನ್ ಪರ ನಿಲ್ಲುವುದಾಗಿ ಎಲ್ಲಾ ಶಾಸಕರು, ಸಂಸದರು ಪುನರುಚ್ಚರಿಸಿದ್ದಾರೆ.

ಇದರಿಂದ ಆಂಧ್ರ ಪ್ರದೇಶ ಸರ್ಕಾರಕ್ಕೆ ಜಗನ್ ಭಾರಿ ತಿರುಗೇಟು ನೀಡಿದ್ದಾರೆ. ಜಗನ್ ಮೋಹನ್ ರೆಡ್ಡಿ ಮೇಲೆ ಸಿಬಿಐ ದಾಳಿ ನಡೆಸಿದ್ದ ಆಂಧ್ರ ಸರ್ಕಾರದ ಮೇಲೆ ಜಗನ್ ಸರಿಯಾಗಿ ಸೇಡು ತೀರಿಸಿಕೊಂಡಿದ್ದಾರೆ.

ಜಗನ್ಮೋಹನ್ ರೆಡ್ಡಿಗೆ ಸೇರಿದ ನಿವಾಸ ಮತ್ತು ಕಚೇರಿಗಳ ಮೆಲೆ ಕಳೆದ ನಾಲ್ಕು ದಿನಗಳಿಂದ ಸಿಬಿಐ ಸತತ ದಾಳಿ ನಡೆಸುತ್ತಿದೆ. ಸಿಬಿಐ ಎಫ್‌ಐಆರ್‌ನಲ್ಲಿ ಮಾಜಿ ಮುಖ್ಯಮಂತ್ರಿ ದಿ. ವೈಎಸ್ ರಾಜಶೇಖರ ರೆಡ್ಡಿ ಹೆಸರು ಸೇರಿಸಿರುವುದನ್ನು ಖಂಡಿಸಿದ ಜಗನ್ ಬೆಂಬಲಿಗರು ರಾಜೀನಾಮೆಗೆ ಮುಂದಾಗಿದ್ದಾರೆ.

ಸೋಮವಾರ ವಿಧಾನಸಭಾಧ್ಯಕ್ಷ ಎನ್. ಮನೋಹರ್‌ರನ್ನು ಭೇಟಿ ಮಾಡಿದ 25 ಕಾಂಗ್ರೆಸ್ ಶಾಸಕರು, 2 ತೆಲುಗುದೇಶಂ ಪಾರ್ಟಿ, 1 ಪ್ರಜಾ ರಾಜ್ಯಂ ಪಕ್ಷ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಬಂಡಾಯ ಶಾಸಕರ ಜೊತೆಗೆ ಇನ್ನು ಐದಾರು ಶಾಸಕರು ಸೇರುವ ಸಾಧ್ಯತೆಯಿದ್ದು, ಜಗನ್ ಮೇಲೆ ಅನಾವಶ್ಯಕ ಸಿಬಿಐ ದಾಳಿ ನಡೆಸಿರುವ ಕೇಂದ್ರ ಸರ್ಕಾರದ ಪಿತೂರಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+