ಇದು ಗಾಂಧಿಗಿರಿಯಲ್ಲ, ಅಣ್ಣಾಗಿರಿ: ತುಷಾರ್ ಗಾಂಧಿ

ಅಣ್ಣಾ ಹಜಾರೆ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ವ್ಯಕ್ತಿತ್ವದ ಪ್ರತಿರೂಪವೇ ಎಂದು ಬಿಂಬಿಸಲಾಗುತ್ತಿದೆ. ಆದರೆ, ಇಬ್ಬರ ಉಪವಾಸ ಸತ್ಯಾಗ್ರಹ ಕ್ರಮಗಳು ಸಂಪೂರ್ಣ ವಿಭಿನ್ನವಾಗಿದೆ ಎಂದು ಮಹಾತ್ಮ ಗಾಂಧಿಜೀ ಅವರ ಮೊಮ್ಮಗ ತುಷಾರ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರಪಿತ ಗಾಂಧಿ ಅವರ ನಿರಶನ ಎದುರಾಳಿ ಗಳಲ್ಲೂ ಸುಧಾರಣೆ ತಂದು ಸ್ನೇಹಭಾವ ಸೃಷ್ಟಿವಂತದ್ದು. ಆದರೆ ಅಣ್ಣಾ ನಿರಶನ ದ್ವೇಷಭಾವ ಬಿತ್ತುವತ್ತ ಸಾಗಿದೆ. ಇದೊಂದು ರೀತಿಯಲ್ಲಿ
ನಾನಾ ಅಥವಾ ನೀನಾ ಎನ್ನುವಂತಿದೆ ಎಂದು ಅವರು ಹೇಳಿದರು.
ಆಂದೋಲನಗಳಲ್ಲಿ ಅಪಾರ ಸಂಖ್ಯೆಯ ಜನ ಶಕ್ತಿ ತೋರ್ಪಡಿಸುವ ಮೂಲಕ ಅಣ್ಣಾ ಹಜಾರೆ ವ್ಯಕ್ತಿತ್ವ ನಿರಾಶೆಯ ಪ್ರತಿರೂಪದಂತೆ ಭಾಸವಾಗುತ್ತಿದೆ. ಮಂಗಳವಾರ ದಿಲ್ಲಿಯಲ್ಲಿ ಯಥೇಚ್ಛ
ಪ್ರಮಾಣದ ಜನ ಸೇರಿದ್ದು, ಪ್ರಜಾಪ್ರಭುತ್ವ ಹಕ್ಕುಗಳ ಉಲ್ಲಂಘನೆ ಸಲುವಾಗಿಯೇ ಹೊರತು ಅಣ್ಣಾ ಅವರ ಸಲುವಾಗಿಯಲ್ಲ ಎಂದು ತುಷಾರ್‌ಗಾಂಧಿ ಹೇಳಿದರು.
ಮಹಾತ್ಮ ಗಾಂಧಿ ಅವರು ಯಾವುದೇ ಸಂದರ್ಭದಲ್ಲಿ ನಿರಶನ ಈ ಮಟ್ಟಕ್ಕೆ ಬೆಳೆಯಲು ಬಿಡುತ್ತಿರಲಿಲ್ಲ. ಭ್ರಷ್ಟಾಚಾರ ಎಂಬ ರೋಗ ಎಳೆಸುತನದ ವೇಳೆಯೇ ಅದರ ವಿರುದ್ಧ
ಬಾಪೂ ಹೋರಾಟಕ್ಕಿಳಿಯುತ್ತಿದ್ದರು.ಅದು ಗಟ್ಟಿಯಾಗುವ ತನಕ ಬಿಡುತ್ತಿರಲಿಲ್ಲ ಎಂದು ತುಷಾರ್ ಹೇಳಿದ್ದಾರೆ
ಆದರೆ ಅಹಿಂಸಾತ್ಮಕ ಹೋರಾಟವೊಂದರಲ್ಲೇ ಅಣ್ಣಾ ಹಜಾರೆ ಹಾಗೂ ರಾಷ್ಟ್ರಪಿತನ ನಡುವೆ ಹೊಂದಾಣಿಕೆಯಿದೆ. ಪ್ರತಿಭಟನೆ ವೇಳೆ ಇಂದು ಕಲ್ಲು ಬಿದ್ದರೂ ಅಹಿಂಸಾತ್ಮಕ ಶಕ್ತಿಗೆ ಕುಂದುಂಟಾಗುತ್ತದೆ ಎಂದು ಗಾಂಧಿಜೀ ಭಾವಿಸಿದ್ದರು. ಅಂತೆಯೇ ಅಣ್ಣಾ ಅವರು ಕೂಡ ಈ ಆದರ್ಶವನ್ನು ಪಾಲಿಸುತ್ತಿದ್ದಾರೆ ಎಂದು ತುಷಾರ್‌ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications