ಹಗಲಿನಲ್ಲಿ ವಿದ್ಯಾರ್ಥಿ ವೇಷ ರಾತ್ರಿ ಕಳ್ಳರ ವೇಷ

ಹೆಬ್ರಿನಿವಾಸಿ ಇಮ್ಯಾನುವೆಲ್ ಪ್ರದೀಪ್(22) ಹಾಗೂ ಪುತ್ತೂರಿನ ಶಿವಾನಂದ ನಾಯಕ್ (21) ಬಂಧಿತ ಆರೋಪಿಗಳಾಗಿದ್ದಾರೆ. ಇವರು ಪುತ್ತೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು. ಪ್ರದೀಪ್ ಬಿಕಾಂ ವಿದ್ಯಾರ್ಥಿಯಾಗಿದ್ದರೆ, ಶಿವಾನಂದ ಬಿಎಸ್‌ಡಬ್ಲು ವಿದ್ಯಾರ್ಥಿಯಾಗಿದ್ದಾನೆ.
ಆರೋಪಿಗಳಿಬ್ಬರು ಆಗಸ್ಟ್ 13ರಂದು ಕಾರ್ಕಳದ ಕಾಬೆಟ್ಟು ಬಳಿಯ ಸಂತೋಷ್ ಜ್ಯುವೆಲ್ಲರಿಗೆ ಬೈಕಿನಲ್ಲಿ ಬಂದು ಗ್ರಾಹಕರಂತೆ ನಟಿಸಿ 46,900 ರುಪಾಯಿ ಮೌಲ್ಯದ ನಾಲ್ಕು ಚಿನ್ನದ ಸರ ಕಳವು ಮಾಡಿದ್ದರು.
ಇಬ್ಬರ ಪೈಕಿ ಪ್ರದೀಪ ಜುವೆಲ್ಲರಿ ಅಂಗಡಿಯ ಪ್ರವೇಶಿಸಿ ಡಿಸೈನಿಂಗ್ ಚೈನ್ ತೋರಿಸಲು ಹೇಳಿದ್ದಾನೆ. ಆದರೆ, ಆತನ ನಡವಳಿಕೆ ಕಂಡು ಅನುಮಾನಗೊಂಡ ಅಂಗಡಿ ಯುವತಿ, ಉಪಾಯವಾಗಿ ಮೊಬೈಲ್ ಮೂಲಕ ಆತನ ಫೋಟೋ ಕ್ಲಿಕ್ಕಿಸಿದ್ದಾಳೆ.
ಈ ನಡುವೆ ಯುವತಿಗೆ ಯಾಮಾರಿಸಿ ನಾಲ್ಕು ಚಿನ್ನದ ಸರ ಎಗರಿಸಿದ ಅಲ್ಲಿಂದ ಓಡಿ ಹೋಗಿ ಹೊರಗೆ ಬೈಕಿನಲ್ಲಿ ಕುಳಿತಿದ್ದ ಶಿವಾನಂದನ ಜೊತೆ ಪರಾರಿಯಾಗಿದ್ದ. ಪ್ರದೀಪ್ ಫೋಟೋ ಯುವತಿಯ ಮೊಬೈಲಿನಲ್ಲಿ ಇದ್ದುದ್ದರಿಂದ ಇಬ್ಬರನ್ನೂ ಬಂಧಿಸಲು ಸುಲಭವಾಗಿದೆ. ಕಾರ್ಕಳ ಠಾಣಾಧಿಕಾರಿ ಪ್ರಮೋದ್ ಹಾಗೂ ತಂಡ ಪುತ್ತೂರಿನಲ್ಲಿ ಬಂಧಿಸಿದೆ.












Click it and Unblock the Notifications