ಎನ್ಆರ್ ನಾರಾಯಣ ಮೂರ್ತಿಗೆ ಇನ್ಫೋಸಿಸ್ ಗುಡ್ ಬೈ

ನಾರಾಯಣಮೂರ್ತಿಯವರು 1981ರಲ್ಲಿ ಅವರ ಪತ್ನಿ ಸುಧಾ ಮೂರ್ತಿಯವರಿಂದ ಕಡ ತೆಗೆದುಕೊಂಡ 250 ಡಾಲರ್ ಹಣದಿಂದ ಆರಂಭಿಸಿದ್ದರು. ಕಂಪನಿಯ ಸಿಇಓಆಗಿ ಅವರು 21 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಎನ್ಆರ್ಎನ್ ಬಿಟ್ಟ ಹುದ್ದೆಯನ್ನು ಇನ್ನೊಬ್ಬ ಕನ್ನಡಿಗ ಕೆವಿ ಕಾಮತ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ.
ನಿವೃತ್ತರಾಗುತ್ತಿದ್ದರೂ, ಇನ್ಫೋಸಿಸ್ ಜೊತೆಗೆ ಸಂಪರ್ಕ ನಾರಾಯಣಮೂರ್ತಿ ಸಂಪರ್ಕ ಕಡಿದುಕೊಳ್ಳುತ್ತಿಲ್ಲ. ಬೇಕೆಂದಾಗ ಕ್ಯಾಂಪಸ್ಸಿಗೆ ಬರುವ, ಬೇಕಾದವರನ್ನು ಭೇಟಿಯಾಗುವ ಸವಲತ್ತನ್ನು ಉಳಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಆದರೆ, ಕಂಪನಿಯ ಆಡಳಿತದಲ್ಲಿ ತಲೆ ಹಾಕುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ಫೋಸಿಸ್ ರಾಜಗುರುವನ್ನು ಭಾವಪೂರ್ಣವಾಗಿ ಬೀಳ್ಕೊಡಲು ಕಂಪನಿ ಭಾರೀ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆದರೆ, ಪತ್ರಕರ್ತರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನವನ್ನು ನಿರಾಕರಿಸಲಾಗಿದೆ.












Click it and Unblock the Notifications