ಕೈಲಾಗದ ಕಟ್ಟಾ ಸುಬ್ರಹ್ಮಣ್ಯ ಮಾಧ್ಯಮಗಳ ಮೇಲೆ ಎಗರಾಡಿದ

katta-subramanya-bail-lawer-blames-media
ಬೆಂಗಳೂರು, ಆಗಸ್ಟ್ 19: ವರಮಹಾಲಕ್ಷ್ಮಿ ಹಬ್ಬ, ಸ್ವಾತಂತ್ರ್ಯ ದಿನಾಚರಣೆ ಎರಡನ್ನೂ ಜೈಲಿನಲ್ಲಿ ಕೊಳೆತಿದ್ದೇ ಬಂತು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಬಿಡುಗಡೆಯ ಭಾಗ್ಯ ಮರೀಚಿಕೆಯಾಗಿದೆ. ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಹಾಗೂ ಇಟಾಸ್ಕಾ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ. ಶ್ರೀನಿವಾಸ್ ಜತೆಗೂಡಿ ಕೃಷ್ಣ ಜನ್ಮಾಷ್ಟಮಿಯನ್ನೂ ಜೈಲಿನಲ್ಲಿಯೇ ಕಳೆಯಬೇಕಾದ ಅನಿವಾರ್ಯ ಕರ್ಮ ಅವರದಾಗಿದೆ.

ಏಕೆಂದರೆ, ಜಾಮೀನು ಕೋರಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೋಮವಾರಕ್ಕೆ (ಆ.22) ಮುಂದೂಡಿದೆ. ಗುರುವಾರ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ವಿ. ಜಗನ್ನಾಥನ್ ಅವರು, ವಿಚಾರಣೆಯನ್ನು ಮುಂದೂಡಿದರು.

ವಿಚಾರಣೆ ವೇಳೆ ಮಾಧ್ಯಮಗಳ ಮೇಲೆ ಆರೋಪ: 'ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಜಗದೀಶನಿಗೆ ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಧೀಶರು ಜಾಮೀನು ನೀಡದೇ ಇರಲು ಮಾಧ್ಯಮಗಳೇ ಕಾರಣ. ಇವರ ವಿರುದ್ಧ ಮಾಧ್ಯಮಗಳು ರಂಜಿತ ವರದಿಗಳನ್ನು ಬಿತ್ತರಿಸಿದ ಪರಿಣಾಮವಾಗಿ ಇವರಿಗೆ ಜಾಮೀನು ದೊರೆಯಲಿಲ್ಲ' ಎಂದು ಅವರ ವಕೀಲ ಸಿವಿ ನಾಗೇಶ್ ಮಾಧ್ಯಮಗಳ ಮೇಲೆ ಹರಿಹಾಯ್ದರು.

ಅದಕ್ಕೆ ನ್ಯಾಯಮೂರ್ತಿಗಳು, 'ನೀವು ಈ ರೀತಿಯಾಗಿ ಯಾವುದೇ ಒಬ್ಬ ನ್ಯಾಯಾಧೀಶರ ಮೇಲೆ ನೇರ ವಾಗ್ದಾಳಿ ಮಾಡುವುದು ಸರಿಯಲ್ಲ. ನ್ಯಾಯಾಧೀಶರ ಆದೇಶ ಸರಿಯಿಲ್ಲ ಎಂದು ಹೇಳುವುದಷ್ಟೇ ನಿಮ್ಮ ಕೆಲಸ. ಆದರೆ ಮಾಧ್ಯಮಗಳಿಂದ ಪ್ರೇರಿತವಾಗಿದ್ದಾರೆ ಎನ್ನುವುದು ಸರಿಯಲ್ಲ. ಮಾಧ್ಯಮಗಳ ಮೇಲೆ ನಿಮಗೆ ಕೋಪ ಇದ್ದರೆ, ಅವುಗಳತ್ತ ನೀವು ಗಮನ ಹರಿಸಬೇಡಿ ಅಷ್ಟೇ' ಎಂದರು.

ಈ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿರುವ ಹಿರಿಯ ವಕೀಲ ಎಂಟಿ ನಾಣಯ್ಯ ಅವರು ವಾದಿಸಿ, 'ನಡುರಾತ್ರಿ ಕಟ್ಟಾ ಅವರನ್ನು ಬಂಧಿಸಲಾಗಿದೆ ಎಂಬ ವಾದದಲ್ಲಿ ಹುರುಳಿಲ್ಲ. ಈ ಅಪ್ಪ-ಮಗ ಕೋಟಿಗಟ್ಟಲೆ ಹಣದ ಅವ್ಯವಹಾರ ನಡೆಸಿದ್ದಾರೆ. ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಸಂಬಂಧ ಅವರಿಂದ ಬಲವಂತವಾಗಿ ಸಹಿ ಹಾಕಿಸಿಕೊಳ್ಳಲಾಗಿದೆ. ಈ ಕುರಿತು ನಮ್ಮಲ್ಲಿ ಸಂಪೂರ್ಣ ದಾಖಲೆಗಳು ಇವೆ' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+