ಅಣ್ಣಾಗೆ ಬೆಂಬಲ ನೀಡಿದ್ರೆ ಆಶ್ರಮದ ಮೇಲೆ ಸಿಬಿಐ ದಾಳಿ

ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ನಗರದ ಫ್ರೀಡಂಪಾರ್ಕ್‌ನಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬೆದರಿಕೆ ವಿಷಯ ಹೊರಗೆಡವಿದ್ದಾರೆ.
ಆಶ್ರಮದ ಶಿಕ್ಷಣ ಸಂಸ್ಥೆಗಳಲ್ಲಿ ಅಕ್ರಮ ನಡೆಯುತ್ತಿದ್ದು, ಸಿಬಿಐ ದಾಳಿ ನಡೆಸುವುದಾಗಿ ಕೇಂದ್ರ ಸರ್ಕಾರ ಬೆದರಿಕೆ ಹಾಕಿದೆ. ಆದರೆ, ಇದ್ಯಾವುದಕ್ಕೂ ತಾವು ಹೆದರುವುದಿಲ್ಲ. ಸಿಬಿಐ ಮಾತ್ರವಲ್ಲದೆ ಬೇರ್‍ಯಾವ ತನಿಖೆ ಬೇಕಾದರೂ ನಡೆಸಿದರೂ ಸಹಕರಿಸುವೆ ಎಂದು ಅವರು ತಿರುಗೇಟು ನೀಡಿದರು.
ಕಳೆದ ಹಲವು ವರ್ಷಗಳಿಂದಲೂ ಆಶ್ರಮದ ಶಿಕ್ಷಣ ಸಂಸ್ಥೆಗಳನ್ನು ಪ್ರಾಮಾಣಿಕವಾಗಿಯೇ ನಡೆಸುತ್ತಿದ್ದೇನೆ. ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಅಲ್ಲದೆ, ರಾಜ್ಯದ 10 ರ್‍ಯಾಂಕ್‌ಗಳಲ್ಲಿ 5 ರ್‍ಯಾಂಕ್ ಆಶ್ರಮದ ವಿದ್ಯಾರ್ಥಿಗಳೇ ಪಡೆದಿದ್ದಾರೆ. ಇದು ಆಶ್ರಮದಲ್ಲಿ ನೀಡುತ್ತಿರುವ ಶಿಕ್ಷಣದ ಗುಣಮಟ್ಟ ತೋರಿಸುತ್ತದೆ. ಹಾಗಾಗಿ ಯಾವ ತನಿಖೆ ಮಾಡಿದರೂ ನಮ್ಮ ಸಂಪೂರ್ಣ ಸಹಕಾರ ಇದೆ ಎಂದರು.
ಸಿಬಿಐ ದಾಳಿ ಬೆದರಿಕೆ ಕೇಂದ್ರ ಸರ್ಕಾರವು ಧಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಆದರೂ ನಾನು ನ್ಯಾಯಾಲಯದ ಮೂಲಕ ಕೇಂದ್ರಕ್ಕೆ ಉತ್ತರ ನೀಡುವುದಾಗಿ ಅವರು ತಿರುಗೇಟು ನೀಡಿದರು.











Click it and Unblock the Notifications