ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕ ಸಸ್ಪೆಂಡ್
ಹೊಳೆಹೊನ್ನೂರು
(ಶಿವಮೊಗ್ಗ ಜಿಲ್ಲೆ), ಆಗಸ್ಟ್ 18: ಭದ್ರಾವತಿ ತಾಲೂಕಿನ ಆಗರದಹಳ್ಳಿಯ ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕೆ ಆರ್ ರಂಗಪ್ಪ ಎಂಬ ಶಿಕ್ಷಕನನ್ನು ಸೇವೆಯಿಂದ ಆಮಾನತುಗೊಳಿಸಲಾಗಿದೆ. id="toptextpromo">ಆಗರದಹಳ್ಳಿ
ಗ್ರಾಮದ ಕ್ಯಾಂಪ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಈ ಶಿಕ್ಷಕನ ಅನುಚಿತ ವರ್ತನೆ ಬಗ್ಗೆ ಒಂದು ವರ್ಷದ ಹಿಂದೆ ತಾಲ್ಲೂಕು ಶಿಕ್ಷಕರ ಸಂಘ ಮತ್ತು ಇಲಾಖೆಯ ಮೇಲಧಿಕಾರಿಗಳಿಗೂ ಲಿಖಿತ ದೂರು ನೀಡಲಾಗಿತ್ತು. id='are-slot-1' class='oiad oi-axt oiadv'> id='top-searched-articles'>ಪೋಷಕರೂ
ಸಹ ಒಮ್ಮೆ ಧರ್ಮದೇಟು ಕೊಟ್ಟು ಎಚ್ಚರಿಸಿದ್ದರು. ಆದರೂ, ನಡವಳಿಕೆ ತಿದ್ದಿಕೊಳ್ಳದ ಕಾರಣ ಭದ್ರಾವತಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಈಚೆಗೆ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳ ಮಾತುಗಳನ್ನು ದಾಖಲಿಸಿ ಆರೋಪ ಖಚಿತಪಡಿಸಿಕೊಂಡು ಮೇಲಧಿಕಾರಿಗಳಿಗೆ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭದ್ರಾವತಿ ಡಿಡಿಪಿಐ ಪರಮಶಿವಪ್ಪ ಶಿಕ್ಷಕ ರಂಗಪ್ಪನಿಗೆ ಸೇವೆಯಿಂದ ಆಮಾನತುಗೊಳಿಸಿ ಆದೇಶಿಸಿದ್ದಾರೆ.











Click it and Unblock the Notifications