ಕೇಸ್ ಹಾಕಿದ ಪತ್ನಿ ಹೊಟ್ಟೆ ಬಗೆದ ಶಿಕ್ಷಕ ಪತಿ

ಈಶ್ವರಪ್ಪ ಎನ್ನುವವನು ಯಲವಟ್ಟಿಯ ಹೈಸ್ಕೂಲಿನಲ್ಲಿ ಶಿಕ್ಷಕನಾಗಿದ್ದಾನೆ. ಜಯಲಕ್ಷ್ಮಿ ಎಂಬಾಕೆಯನ್ನು ಮದುವೆಯಾಗಿ 20 ವರ್ಷಗಳೇ ಕಳೆದಿದೆ. ಆದರೆ, ಈ ಸಂಸಾರದಲ್ಲಿ ಮಕ್ಕಳ ಭಾಗ್ಯ ಇಲ್ಲ ಎಂಬ ಕೊರಗು ಇತ್ತು.
ಇಷ್ಟು ವರ್ಷವಾದರೂ ಒಂದು ಮಗು ಹೆರುವುದಲ್ಲೆ ಆಗುವುದಿಲ್ಲ ಏಕೆ ಬದುಕಿದ್ದೀಯಾ ಎಂದು ಹೀಯಾಳಿಸುತ್ತಾ ಪತ್ನಿಯನ್ನು ಹಿಗ್ಗಾ ಮುಗ್ಗಾ ಥಳಿಸುವುದು ಈಶ್ವರಪ್ಪನ ದೈನಂದಿನ ಕಾರ್ಯಗಳಲ್ಲಿ ಪ್ರಮುಖವಾಗಿತ್ತು.
ಪತ್ನಿಪೀಡಕನ ವಿರುದ್ಧ ಕೇಸು ಹಾಕುವಂತೆ ತಿಳಿದ ನಾಲ್ಕು ಮಂದಿ ಹೇಳಿದ್ದನ್ನು ಕೇಳಿ ಪತಿರಾಯನ ವಿರುದ್ಧ ಕೇಸ್ ಹಾಕಿದ ಜಯಲಕ್ಷ್ಮಿ ನ್ಯಾಯ ಸಿಗುವ ಭರವಸೆ ಇತ್ತು. ಆದರೆ, ಇದನ್ನೇ ನೆಪಮಾಡಿಕೊಂಡು ಕತ್ತಿ ಮಸೆಯುತ್ತಿದ್ದ ಈಶ್ವರಪ್ಪ, ಮೊನ್ನೆ ಇದ್ದಕ್ಕಿದ್ದಂತೆ ಕೇಸ್ ವಾಪಾಸು ಪಡೆಯುವಂತೆ ಆಗ್ರಹಿಸಿದ್ದಾನೆ.
ಇದಕ್ಕೆ ಕ್ಯಾರೆ ಎನ್ನದೆ ಕುಳಿತ್ತಿದ್ದ ಪತ್ನಿಯನ್ನು ಎಳೆದು ಜಾಡಿಸಿ ಒದ್ದು, ಚಾಕುವಿನಿಂದ ಹೊಟ್ಟೆ ಬಗೆದು ಓಡಿ ಹೋಗಿದ್ದಾನೆ. ಜಯಲಕ್ಷ್ಮಿ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಶಿಕ್ಷಕನೊಬ್ಬ ಈ ಕೃತ್ಯದಿಂದ ಯಲವಟ್ಟಿ ಶಾಲೆ ಕೂಡಾ ತಲೆ ತಗ್ಗಿಸುವಂತಾಗಿದೆ.












Click it and Unblock the Notifications