ಕರ್ನಾಟಕದಾದ್ಯಂತ ಪಸರಿಸುತ್ತಿದೆ ಭ್ರಷ್ಟವಿರೋಧಿ ಬೆಂಕಿ

ಯಾದಗಿರಿ, ಬಳ್ಳಾರಿ, ಕೊಪ್ಪಳ, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಮೈಸೂರು, ಮಂಗಳೂರು, ಉಡುಪಿ, ಮಡಿಕೇರಿಗಳಲ್ಲಿಯೂ ಭ್ರಷ್ಟಾಚಾರದ ವಿರುದ್ಧ ಕಿಡಿ ಹೊತ್ತಿಕೊಂಡಿದೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ರಹಿತ ದಿನ ಆಚರಿಸಬೇಕೆಂಬ ಕೂಗು ಕೂಡ ಕೇಳಿಬರುತ್ತಿದೆ.
ಪಟ್ಟಣಗಳಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲಿಯೂ ಜನ ಸಿಡಿದೇಳುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ದನಿಯೆತ್ತುತ್ತಿದ್ದಾರೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾಲೇಜು ಬಂಕ್ ಮಾಡಿ ಚಳವಳಿಗೆ ಧುಮುಕುತ್ತಿದ್ದಾರೆ. ಜಿಲ್ಲೆಜಿಲ್ಲೆಗಳಲ್ಲೂ ವಿನೂತನ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. [ಅಣ್ಣಾ ಚಳವಳಿ ಗ್ಯಾಲರಿ]
ಯಾದಗಿರಿಯಲ್ಲಿ ನಾಯಿಗಳ ಮೆರವಣಿಗೆ : ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಯಾದ ಯಾದಗಿರಿಯಲ್ಲಿ ಟೋಕರಿ ಕೋಲಿ ಸಮಾಜ ಮತ್ತು ವಿವಿಧ ಸಂಘಟನೆಗಳು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ನಾಯಿಗಳ ಜೊತೆ ಮೆರವಣಿಗೆ ಮಾಡಿ ಅಣ್ಣಾ ಹಜಾರೆ ಬಂಧನಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದರು.
"ಅಣ್ಣಾ ಬೆಂಬಲಕ್ಕೆ ಯಂಗಿಸ್ತಾನ್" ನಿಂತಿದೆ ಎಂಬ ಫಲಕಗಳನ್ನು ಹಿಡಿದು ನಗರದ ಶಾಸ್ತ್ರಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಿಯತ್ತಿನ ನಾಯಿಗಳನ್ನು ಹಿಡಿದುಕೊಂಡು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸಾಗಿದರು.
ಬಳ್ಳಾರಿಯಲ್ಲಿ ಪಂಜಿನ ಮೆರವಣಿಗೆ : ನಾಳೆಯಿಂದ ಮೂರು ದಿನಗಳ ಕಾಲ ಮೂರು ಹಂತಗಳ ಬೃಹತ್ ಪ್ರಮಾಣದಲ್ಲಿ ಭ್ರಷ್ಟಾಚಾರದ ವಿರುದ್ಧ ಆಂದೋಲನವನ್ನು ಜಿಲ್ಲಾ ಬಿಜೆಪಿ ಘಟಕ ಹಮ್ಮಿಕೊಂಡಿದೆ.
ಆ.19ರಂದು ಯುವಮೋರ್ಚಾ ಕಾರ್ಯಕರ್ತೆಯಲು ಪಂಜಿನ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ಆ.20ರಂದು ಕನಕದುರ್ಗಮ್ಮ ದೇವಸ್ಥಾನದಲ್ಲಿ ಅಣ್ಣಾ ಫೋಟೋಗೆ ಆರತಿ ಬೆಳಗಲಿದ್ದಾರೆ. ಆ.22ರಂದು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮೆರವಣಿಗೆ ಹಮ್ಮಿಕೊಂಡಿದ್ದಾರೆ.












Click it and Unblock the Notifications