ಸಂವಿಧಾನ ವಿರೋಧಿ ಅಣ್ಣಾ ಪಕ್ಕಾ ರಾಜಕಾರಣಿ

ಸಂಸತ್ತಿನಲ್ಲಿ ಮಂಡಿಸಲಾದ ಲೋಕಪಾಲ ಮಸೂದೆಯ ಪ್ರತಿಗಳನ್ನು ಸುಟ್ಟುಹಾಕಲು ಹಜಾರೆಯವರಿಗೆ ಹಕ್ಕು ನೀಡಿದವರು ಯಾರು? ಹಜಾರೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಬದಲು ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ನಿಯಂತ್ರಣದ ದೃಷ್ಟಿಯಿಂದ ಹಜಾರೆ ಅವರ ಬಂಧನ ಸರಿಯಾದ ಕ್ರಮವಾಗಿದೆ. ಅಣ್ಣಾ ಅವರಿಗೆ ಪೊಲೀಸರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ನೀಡಿದ್ದರೂ ಪೊಲೀಸರ ಮಾತಿಗೆ ಬೆಲೆ ಕೊಡದ ಅಣ್ಣಾ ಹಠ ಹಿಡಿದು ಕೂತಿರುವುದು ನೋಡಿದರೆ, ಅವರ ಹೋರಾಟದ ಉದ್ದೇಶದ ಬಗ್ಗೆ ಅನುಮಾನ ಮೂಡಿಸುತ್ತದೆ.
ಹಜಾರೆಯವರು ಆಮರಣ ನಿರಶನದಿಂದ ಯಾರಿಗೆ ಲಾಭ, ಪ್ರಚಾರ ಪಡೆಯಬಹುದು ಅಷ್ಟೇ. ಅದರ ಬದಲಿಗೆ ಸಂಸತ್ತಿನ ಸ್ಥಾಯಿ ಸಮಿತಿಯ ಮುಂದೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲಿ, ಲೋಕಪಾಲ ಮಸೂದೆಯನ್ನು ಜಾರಿಗೊಳಿಸುವಂತೆ ಸಂಸದರ ಮೇಲೆ ಸಾತ್ವಿಕ ಒತ್ತಡ ಹೇರಲಿ, ಅದು ಬಿಟ್ಟು ಉಪವಾಸ ಕೂತು, ಜನತೆಯನ್ನು ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದು ದಿಗ್ವಿಜಯ್ ಹೇಳಿದ್ದಾರೆ.












Click it and Unblock the Notifications