ಪಡಿತರ -ಗ್ಯಾಸ್ ಸಂಪರ್ಕ ದಾಖಲಾತಿ ಸಲ್ಲಿಕೆ ಆ. 20ರವರೆಗೆ

ಆನ್‌ಲೈನ್ ಮೂಲಕ ದಾಖಲಾತಿಗಳನ್ನು ಸಲ್ಲಿಸುವಾಗ ವೆಬ್‌ಸೈಟ್ ಮೇಲೆ ಅಧಿಕ ಒತ್ತಡ ಬಿದ್ದಿರುವುದು ಮತ್ತಿತರ ಕಾರಣಗಳಿಂದಾಗಿ ಅನೇಕ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಾಲಾವಧಿ ವಿಸ್ತರಣೆ ಮಾಡಲಾಗಿದೆ.
ಆಹಾರ ಇಲಾಖೆಯ ಐದು ವಲಯ ಕಚೇರಿಗಳ ವಿಳಾಸ-ದೂರವಾಣಿ ಸಂಖ್ಯೆ:
ಬೆಂಗಳೂರು ಕೇಂದ್ರ ವಲಯ: ಮೋಹನ್ ಮ್ಯಾನ್ಷನ್ ಕಟ್ಟಡ, ಕಸ್ತೂರಾಬಾ ರಸ್ತೆ. ದೂರವಾಣಿ: 2221 4431
ಪಶ್ಚಿಮ ವಲಯ: ಸಹಕಾರಿ ಭವನ, ಭಾಷ್ಯಂ ವೃತ್ತದ ಬಳಿ, ರಾಜಾಜಿನಗರ. ದೂ: 2315 3259
ಉತ್ತರ ವಲಯ: 11ನೇ ಸಿ ಕ್ರಾಸ್, ವೈಯಾಲಿಕಾವಲ್. ದೂ: 2344 5702
ದಕ್ಷಿಣ ವಲಯ: 3ನೇ ಮುಖ್ಯ ರಸ್ತೆ, ಚಾಮರಾಜಪೇಟೆ. ದೂ: 2661 3531
ಪೂರ್ವ ವಲಯ: ಪಾಲಿಕೆ ಕಟ್ಟಡ, ಸೆಂಟ್ ಜಾನ್ ರಸ್ತೆ. ದೂ: 2536 0750
ದಾಖಲಾತಿ ಸಲ್ಲಿಸದೇ ಇರುವುದು, ದಾಖಲಾತಿ ಸಲ್ಲಿಸಿದ್ದರೂ ತಪ್ಪಾಗಿ ನಮೂದಾಗಿರುವುದು ಮತ್ತಿತರ ಕಾರಣಗಳಿಂದ ಅಮಾನತಿನ ಸ್ಥಿತಿಯಲ್ಲಿರುವ ಪಡಿತರ ಚೀಟಿದಾರರು ಮತ್ತು ಎಲ್‌ಪಿಜಿ ಗ್ರಾಹಕರು ಖುದ್ದಾಗಿ ಅಥವಾ ಆನ್‌ಲೈನ್ (http://ahara.kar.nic.in/) ಮೂಲಕ ದಾಖಲಾತಿಗಳನ್ನು ಸಲ್ಲಿಸುವಂತೆ ಕೋರಲಾಗಿದೆ.
ನಗರದಲ್ಲಿರುವ ಆಹಾರ ಇಲಾಖೆಯ ಐದು ವಲಯ ಕಚೇರಿಗಳಲ್ಲಿ ಪಡಿತರ ಚೀಟಿ ಸಂಖ್ಯೆ ಅಥವಾ ಅನಿಲ ಸಂಪರ್ಕದ ಸಂಖ್ಯೆ ಜತೆ ವಿದ್ಯುತ್ ಮೀಟರ್‌ನ ಆರ್.ಆರ್. ಸಂಖ್ಯೆ ಇರುವ ವಿದ್ಯುತ್ ಬಿಲ್ ರಸೀದಿ ಸಲ್ಲಿಸಬೇಕು.











Click it and Unblock the Notifications