ಬೆಂಗಳೂರಿನಲ್ಲಿ ತುಂಬಿತುಳುಕಿದ ಸಾಕು ಡಾಟ್ ಕಾಂ

Corruption Saaku.com Bangalore rally
ಬೆಂಗಳೂರು, ಆ. 16 : ಈ ದೇಶದಲ್ಲಿ ನಿಂತರೆ ಲಂಚ ಕೊಡಬೇಕು, ಕೂತರೆ ಲಂಚ ಕೊಡಬೇಕು. ಸಾಕಪ್ಪಾ ಸಾಕು. ಇನ್ನಾದರೂ ಸಾಕು. ಏಳ್ರಪ್ಪಾ, ಎದ್ದೇಳ್ರಮ್ಮಾ. ಈ ಅನಿಷ್ಟದ ವಿರುದ್ಧ ಹೋರಾಡುವುದಕ್ಕೆ ನಿಮ್ಮ ಹೆಗಲುಗಳನ್ನು ಸ್ವಲ್ಪ ಸಾಲ ಕೊಡ್ತೀರಾ?

64ನೇ ಭಾರತ ಸ್ವತಂತ್ರ ದಿನಾಚರಣೆಯಂದು ಭ್ರಷ್ಟಾಚಾರದ ವಿರುದ್ಧ ಸಾಮೂಹಿಕ ದನಿ ಎತ್ತಿದವರು ಬೆಂಗಳೂರಿನ ಯುವಕರು ಮತ್ತು ಯುವತಿಯರು. ಸಾಕು ಡಾಟ್ ಕಾಂ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬೃಹತ್ ಜನಜಾಗೃತಿ ಆಂದೋಲನದಲ್ಲಿ ಸಾವಿರಾರು ದನಿಗಳು ಒಂದಾದವು. [ಚಿತ್ರಪಟ ನೋಡಿರಿ, ಚಿತ್ರಗಳು: ಸಾಧು ಶ್ರೀನಾಥ್]

ವಿದ್ಯಾವಂತ ಯುವಜನತೆಯೇ ಹೆಚ್ಚಾಗಿ ಭಾಗವಹಿಸಿದ್ದ ಈ ಚಳವಳಿ 70 ದಶಕದಲ್ಲಿ ಜಯಪ್ರಕಾಶ್ ನಾರಾಯಣ್ ಅವರು ಹಮ್ಮಿಕೊಂಡಿದ್ದ ಸಂಪೂರ್ಣ ಕ್ರಾಂತಿಯನ್ನು ನೆನಪಿಸಿತು.

ಸಾಕು ಡಾಟ್ ಕಾಂ ಟೀ ಶರ್ಟುಗಳನ್ನು ಧರಿಸಿ, ಅಣ್ಣಾ ಹಜಾರೆಗೆ ಬೆಂಬಲ ಸೂಚಿಸುವ ಘೋಷಣೆಗಳನ್ನು ಕೂಗುತ್ತಿದ್ದ ಮೆರವಣಿಗೆಕಾರರು ಬೆಂಗಳೂರಿನ ಹಾದಿ ಬೀದಿಗಳಲ್ಲಿ ಶಾಂತಿಯುತ ಜನಬಲ ಪ್ರದರ್ಶಿಸಿದರು. ಇದೇ ಸಾಕು.ಕಾಂ ಯುವಪಡೆ ಅಣ್ಣಾ ಹಜಾಗೆ ಬೆಂಗಳೂರಿಗೆ ಬಂದಾಗ ಬಸವನಗುಡಿ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಿತ್ತು.

ನಿಮ್ಮ ಬೆಂಬಲ ಯಾರಿಗೆ? ಜನ ಲೋಕಪಾಲ ಚಳವಳಿಗೋ ಅಥವಾ ಪ್ರತಿಭಟನೆಕಾರರ ದನಿಯನ್ನು ದಮನ ಮಾಡುತ್ತಿರುವ ಯುಪಿಎ ಸರಕಾರಕ್ಕೋ? ಸಂಕೋಚಪಡದೆ ತಿಳಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+