ಹೈದರಾಬಾದ್, ಆಗಸ್ಟ್ 14: ನಾಲ್ಕೈದು ತಿಂಗಳ ಹಿಂದೆ ಗಂಡ ದೂರವಾದ ಎಂದು ಸೀದಾ ತವರು ಮನೆಗೆ ಬಂದಿದ್ದಳು. ತುಂಬು ಬಸುರಿ ಬಂದವಳೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಅನೇಕ ಬಾರಿ ಹೇಳಿಕಳಿಸಿದರೂ ಮಗುವನ್ನು ನೋಡಲೂ ಪತಿರಾಯ ಬರಲಿಲ್ಲ. ಇದರಿಂದ ತೀರಾ ಬೇಸರಗೊಂಡ ತಾಯಿ ಸೀದಾ ನೇಣಿಗೆ ಕೊರಳೊಡ್ಡಿದ್ದಾರೆ.
19 ವರ್ಷದ ಜ್ಯೋತಿಯೇ ನೇಣಿಗೆ ಶರಣಾದ ಯುವತಿ. ಇವರು ಇಲ್ಲಿನ ಸುಭಾಷ್ ನಗರದಲ್ಲಿದ್ದರು. ಜೇಡಿಮೆಲ್ಟಾ ಪೊಲೀಸರು ಪತಿರಾಯ ರಾಕೇಶನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
Disheartened over her husband’s discountenance 19 year old Jyoti hanged herself to death at her parent’s house in Subhashnagar, The incident occurred under the jurisdiction of Jedimetla police station.