ಪದ್ಮನಾಭ ದೇವರಿಗೂ ನೇಪಾಳಕ್ಕೂ ಅನಂತ ನಂಟು

ತಿರುವನಂತಪುರಂ ಆ.13: ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಬಿ ಕೊಠಡಿ ತೆರೆಯುವುದಕ್ಕಾಗಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ (ದೇವ ಪ್ರಶ್ನೆ) ಸಂದರ್ಭದಲ್ಲಿ ಸಿಗುತ್ತಿರುವ ಉತ್ತರಗಳು ಅನೇಕ ಕುತೂಹಲ ಅಂಶಗಳತ್ತ ಬೆಳಕು ಹರಿಸಿದೆ.

ಅನಂತ ಪದ್ಮನಾಭ ದೇವಸ್ಥಾನಕ್ಕೂ ನೇಪಾಳಕ್ಕೂ ಇರುವ ಸಂಬಂಧವೂ ಗೋಚರವಾಗಿದೆ.ನೇಪಾಳದ ಮುಕ್ತಿನಾಥದ ಗಂಡಕಿ ನದಿಯ ತೀರದಿಂದ ತಂದಿರುವ 12 ಸಾವಿರ ಸಾಲಿಗ್ರಾಮ ಶಿಲೆಕಲ್ಲುಗಳಿಂದಲೇ ಇಲ್ಲಿನ ಅಧಿದೇವತೆಯ ವಿಗ್ರಹ ನಿರ್ಮಿ ಸಲಾಗಿದೆ ಎಂಬುದು ದೇವಪ್ರಶ್ನೆಯ ವೇಳೆ ಗೋಚರಿಸಿದೆ.

ಅಂದಿನ ನೇಪಾಳ ರಾಜಮನೆತನದ ದೇವಸ್ಥಾನವಾಗಿದ್ದ ಪಶುಪತಿನಾಥ ದೇವಳಕ್ಕೂ ಅನಂತಪದ್ಮನಾಭ ದೇವಳ ಹಾಗೂ ತಿರುವಾಂಕೂರು ಸಂಸ್ಥಾನಕ್ಕೂ ಸಂಬಂಧವಿರುವುದು ತಿಳಿದು ಬಂದಿದೆ.

ನೇಪಾಳ-ತಿರುವನಂತಪುರ ದೇವಳದ ಬಾಂಧವ್ಯದ ಸ್ಮರಣಾರ್ಥ ಹಿಂದೆ ಅನೇಕ ಪರಂಪರಾಗತ ಸಾಂಪ್ರದಾಯಿಕ ವಿಧಿ ವಿಧಾನಗಳು ನಡೆಯುತ್ತಿದ್ದವು. ಆದರೆ, ಈಗ ಇದೆಲ್ಲವೂ ನಿಂತು ಹೋಗಿರುವುದು ದೇವರ ಕೋಪಕ್ಕೂ ಕಾರಣವಾಗಿದೆ ಎಂದು ಅಷ್ಟಮಂಗಲ ಪ್ರಶ್ನೆ ನೆರವೇರಿಸುತ್ತಿರುವ ಪ್ರಧಾನ ದೈವಜ್ಞ ರಾದ ಮಧೂರು ನಾರಾಯಣ ರಂಗಭಟ್ಟ ತಿಳಿಸಿದ್ದಾರೆ.

ಬಿ ಕೊಠಡಿ ತೆಗೆದರೆ ಆಪತ್ತು: ದೇವಳದ ಸಂಪತ್ತಿನ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಹೆಚ್ಚಿನ ಭದ್ರತೆ ಅಗತ್ಯವಿದೆ. ಆರನೇ ಬಿ ಕೊಠಡಿಯನ್ನು ತೆರೆದರೆ ಸಾರ್ವಜನಿಕರಿಗೆ ಆಪತ್ತು ಕಾದಿದೆ. ಗರ್ಭಗುಡಿಯ ತಳಭಾಗದಲ್ಲೇ ಈ ಕೊಠಡಿ ಇರುವುದರಿಂದ ಕೊಠಡಿಯನ್ನು ಹೊಕ್ಕರೆ, ಸನ್ನಿಧಿ ಅಶುದ್ಧವಾಗುತ್ತದೆ ಎಂದು ಮಧೂರು ನಾರಾಯಣ ರಂಗಭಟ್ಟ ಎಚ್ಚರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+