ಮಾಜಿ ಮುಖ್ಯಮಂತ್ರಿ ಜೈಲಿಗೆ; ಕರ್ನಾಟಕ ಅಲ್ಲ ಸಿಕ್ಕಿಂ ಸಿಎಂ
ಗ್ಯಾಂಗ್‌ಟಕ್,
ಆ. 12: ಕರ್ನಾಟಕದಲ್ಲಿ ಮಾಜಿ ಮಂತ್ರಿಗಳು, ಮುಖ್ಯಮಂತ್ರಿಗಳು ಜೈಲುಪಾಲಾಗಲು ಕ್ಯೂನಲ್ಲಿ ನಿಂತಿರುವಾಗ ಸಿಕ್ಕಿಂನಲ್ಲಿ ಮಾಜಿ ಮುಖ್ಯಮಂತ್ರಿ ಈಗಾಗಲೇ ಜೈಲು ಸೇರಿದ್ದಾರೆ. ಇದರಿಂದ ಕಾನೂನಿನಲ್ಲಿ ವಿಶ್ವಾಸವಿರುವ ಜನಸಾಮಾನ್ಯರಿಗೆ ಹಾಲುಕುಡಿದಂತಾಗಿದೆ. id="toptextpromo">ಭ್ರಷ್ಟಾಚಾರ
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕಿಂ ಕಾಂಗ್ರೆಸ್ ಪಕ್ಷದ ಹಾಲಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ, 70 ವರ್ಷದ ನರ ಬಹದ್ದೂರ್ ಭಂಡಾರಿ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಆದರೆ ಜೈಲಿಗೆ ತೆರಳಿದ ಕೆಲ ಗಂಟೆಗಳಲ್ಲೇ ಎದೆ ನೋವು ಕಾಣಿಸಿಕೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಮೂರು
ಬಾರಿ ಮುಖ್ಯಮಂತ್ರಿಯಾಗಿದ್ದ ಭಂಡಾರಿ, 1979ರಿಂದ 84ರವರೆಗಿನ ಮೊದಲ ಅವಧಿಯಲ್ಲಿ ಗ್ರಾಮೀಣ ನೀರು ಸರಬರಾಜು ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದರು. ಸಿಬಿಐ ಪ್ರಕರಣದ ತನಿಖೆ ನಡೆಸಿತ್ತು. ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಸಿಕ್ಕಿಂ ಹೈಕೋರ್ಟ್ ಬುಧವಾರ ಎತ್ತಿಹಿಡಿದಿತ್ತು. ಕೆಳ ಹಂತದ ನ್ಯಾಯಾಲಯ ಅವರಿಗೆ ನೀಡಿದ್ದ ಆರು ತಿಂಗಳ ಸಾದಾ ಶಿಕ್ಷೆಯನ್ನು ಹೈಕೋರ್ಟ್ ಒಂದು ತಿಂಗಳಿಗೆ ಇಳಿಸಿದೆ.











Click it and Unblock the Notifications