ಬೆಂಗಳೂರಲ್ಲಿ ಸ್ನೇಹಿತರಿಂದ ಗೃಹಿಣಿಯ ಅತ್ಯಾಚಾರ

ಮಹಿಳೆಯ ಸ್ನೇಹಿತರಿಂದಲೇ ಅತ್ಯಾಚಾರ ನಡೆದಿದ್ದು, ಸಿದ್ದೇಶ್ ಮತ್ತು ಆಸಿಮ್ ರಾಯ್ ಎಂಬಿಬ್ಬರನ್ನು ಆಡುಗೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಾಚಾರಿಗಳು ಪಶ್ಚಿಮ ಬಂಗಾಳದವರಾಗಿದ್ದು, ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು.
ಅಂಬೇಡ್ಕರ್ ನಗರದ ನಿವಾಸಿಯಾಗಿರುವ ಗೃಹಿಣಿ ಬಸ್ ಗಾಗಿ ಕಾಯುತ್ತ ನಿಂತಿದ್ದಾಗ, ಆಕೆಯ ಪರಿಚಯದವರಾದ ಸಿದ್ದೇಶ್ ಮತ್ತು ಆಸಿಮ್ ನಿರ್ಜನವಾಗಿದ್ದ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮಹಿಳೆಯರಿಗೆ ಅಸುರಕ್ಷಿತ ತಾಣವಾಗಿ ಪರಿಣಮಿಸುತ್ತಿದೆ. ಕೆಲ ದಿನಗಳ ಹಿಂದೆ ನಾಯಂಡಹಳ್ಳಿಯಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಬನ್ನೇರುಘಟ್ಟ ರಸ್ತೆಯಲ್ಲಿ ಕೂಡ ಅಪ್ರಾಪ್ರ ವಯಸ್ಕ ಬಾಲಕಿಯ ಮೇಲೇ ಸತತ ಮೂರು ದಿನ ಅತ್ಯಾಚಾರ ಮಾಡಲಾಗಿತ್ತು.












Click it and Unblock the Notifications