ಗೌಡರ ಗೂಡು ಸೇರಿಕೊಂಡ 4+1 ವಲಸೆ ಹಕ್ಕಿಗಳು

ಬೆಂಗಳೂರು ಆ.11: ಸಚಿವ ಸಂಪುಟ ವಿಸ್ತರಣೆಗೆ ಕೊನೆಗಳಿಗೆಯಲ್ಲಿ ಹೈಕಮಾಂಡ್ ಓಕೆ ಅಂದಿದೆ. ಇಂದು ಸಂಜೆ 5.30 ನಿಮಿಷಕ್ಕೆ ಸರಿಯಾಗಿ ರಾಜಭವನದಲ್ಲಿ ಬಿಜೆಪಿಗೆ ವಲಸೆ ಬಂದ ಶಾಸಕರು ಪ್ರಥಮ ಬಾರಿಗೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನೂತನ ಸಂಪುಟ ದರ್ಜೆ ಸಚಿವರಾಗಿ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ, ಆನಂದ್ ಆಸ್ನೋಟಿಕರ್, ಸಿ.ಪಿ ಯೋಗೀಶ್ವರ್, ನರಸಿಂಹ ನಾಯಕ(ರಾಜೂ ಗೌಡ) ಹಾಗೂ ವರ್ತೂರು ಪ್ರಕಾಶ್ ಅವರು ಪ್ರಮಾಣ ವಚನ ಸ್ವೀಕರಿಸಿದರು.

ಬೆಳಗ್ಗೆ ದಿಢೀರ್ ಎಂದು ದೆಹಲಿಗೆ ತೆರಳಿದ್ದ ಸಿಎಂ ಸದಾನಂದ ಗೌಡರು, ಹೈಕಮಾಂಡ್ ಆದೇಶದಂತೆ ಸಂಪುಟಕ್ಕೆ ಐವರನ್ನು ಮಾತ್ರ ಆರಿಸಿದ್ದಾರೆ. ನೂತನ ಸಚಿವರಲ್ಲಿ ನಾಲ್ವರು ವಲಸಿಗರಾಗಿದ್ದಾರೆ. ಅಪರೇಷನ್ ಕಮಲದ ಫಲವಾಗಿ ಬಿಜೆಪಿಯಲ್ಲಿ ಹುಟ್ಟಿದವರು ಬಾಲಚಂದ್ರ ಜಾರಕಿಹೊಳಿ, ಆನಂದ್ ಆಸ್ನೋಟಿಕರ್, ಸಿ.ಪಿ ಯೋಗೀಶ್ವರ್ ಹಾಗೂ ವರ್ತೂರು ಪ್ರಕಾಶ್. ರಾಜೂಗೌಡ ಮೂಲ ಬಿಜೆಪಿಯ ನಿಷ್ಠಾವಂತ ಶಾಸಕ.

ಬಾಲಚಂದ ಜಾರಕಿಹೊಳಿ-ಅರಬಾವಿ ಕ್ಷೇತ್ರ
ಆನಂದ ಆಸ್ನೋಟಿಕರ್-ಕಾರವಾರ ಕ್ಷೇತ್ರ
ಸಿ.ಪಿ ಯೋಗೀಶ್ವರ್-ಚನ್ನಪಟ್ಟಣ ಕ್ಷೇತ್ರ
ನರಸಿಂಹ ನಾಯಕ- ಶೋರಾಪುರ ಕ್ಷೇತ್ರ
ವರ್ತೂರು ಪ್ರಕಾಶ್-ಕೋಲಾರ(ಪಕ್ಷೇತರ ಅಭ್ಯರ್ಥಿ)

ಇಂದಿನ ಸಚಿವ ಸಂಪುಟ ವಿಸ್ತರಣೆಯಿಂದ ಸದಾನಂದ ಗೌಡರನ್ನು ಸೇರಿಸಿಕೊಂಡರೆ ಸಂಪುಟ ಗಾತ್ರ 27ಕ್ಕೇರುತ್ತದೆ. ಇನ್ನೂ 7 ಸ್ಥಾನಗಳು ಬಾಕಿ ಇದೆ. ಜೀವರಾಜ್, ಸಿಟಿ ರವಿ, ಬಿ. ಸುರೇಶ್ ಗೌಡ, ಬೇಳೂರು ಗೋಪಾಲಕೃಷ್ಣ, ಸೊಗಡು ಶಿವಣ್ಣ, ಅಪ್ಪಚ್ಚು ರಂಜನ್, ಎಸ್ ಕೆ ಬೆಳ್ಳುಬ್ಬಿ ಇನ್ನೂ ಸಚಿವ ಸ್ಥಾನದ ಆಸೆಯನ್ನು ಜೀವಂತವಾಗಿಟ್ಟುಕೊಂಡಿದ್ದಾರೆ.

ರೆಡ್ಡಿ ಸೋದರರು ಹಾಗೂ ಶ್ರೀರಾಮುಲು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಯಾವುದೇ ಚಕಾರ ಎತ್ತಿಲ್ಲ. ಹೈಕಮಾಂಡ್ ಕೂಡಾ ಸ್ಪಷ್ಟ ಸೂಚನೆ ನೀಡಿಲ್ಲ,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+