ಏ.ಯಾಕ್ರೋ ಚುಡಾಯಿಸ್ತೀರಾ? ಎಂದ ಮರುಕ್ಷಣವೇ ಮರ್ಡರ್

ತನ್ನ ಸೋದರಿಯನ್ನು ಚುಡಾಯಿಸುತ್ತಿದ್ದ ದಿನೇಶ್ ಹಾಗು ಅವರ ಗ್ಯಾಂಗ್ ಗೆ ಪಾಠ ಕಲಿಸುವುದಾಗಿ ಹೊರಟ 22 ವರ್ಷದ ಸೋನು ರಸ್ತೆಯಲ್ಲಿ ಹೆಣವಾಗಿ ಮಲಗಿದ್ದಾನೆ. ಘಟನೆ ನಡೆದು ಎರಡು ಮೂರು ದಿನಗಳಾದರೂ ಪುಂಡರನ್ನು ಹಿಡಿಯಲು ಪೊಲೀಸರು ಮನಸ್ಸು ಮಾಡಿಲ್ಲ.
ಸಾರ್ವಜನಿಕರ ಒತ್ತಾಯದ ಮೇರೆಗೆ ದಿನೇಶ್ ಎಂಬುವವನ ಮೇಲೆ ಕೊಲೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಸೋನು ಕುಟುಂಬ ಆರೋಪಿಸಿದೆ.
ಈವ್ ಟೀಸಿಂಗ್ ಕೇಸ್ ದಾಖಲಿಸಲು ಒಪ್ಪದ ಪೊಲೀಸರು ಸೋನು ಕೊಲೆ ನಂತರ ಕೇಸ್ ದಾಖಲಿಸಿದ್ದೇಕೆ ಎಂದು ಸೋನು ಗೆಳೆಯರು ಪ್ರಶ್ನಿಸಿದ್ದಾರೆ. ಸೋನು ದುಡುಕಬಾರದಿತ್ತು.
ದಿನೇಶ್ ಹಾಗೂ ಅವನ ಗ್ಯಾಂಗ್ ಯುವತಿಯರನ್ನು ಚುಡಾಯಿಸುವುದು, ಅಸಭ್ಯವಾಗಿ ವರ್ತಿಸುವುದು ಪೊಲೀಸರಿಗೆ ಮೊದಲೇ ತಿಳಿದಿತ್ತು. ಪ್ರಭಾವಿ ನಾಯಕರ ಒತ್ತಡದಿಂದ ಯಾವುದೇ ಕ್ರಮ ಜರುಗಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.












Click it and Unblock the Notifications