ಶಿಶುವನ್ನು ಶೌಚಾಲಯದಲ್ಲಿ ಎಸೆದ ಮಹಾಲಕ್ಷ್ಮೀ

ನಿಲ್ದಾಣದಲ್ಲಿ ನೆರೆದಿದ್ದ ಜನರೆಲ್ಲ ಆ 'ಮಹಾತಾಯಿ'ಗೆ ಹಿಡಿಶಾಪ ಹಾಕಿದರು. ಮಗುವನ್ನು ಆ ರೀತಿ ಅಮಾನವೀಯವಾಗಿ ಸಾಯಿಸಬೇಕಿದ್ದರೆ ಮಗುವನ್ನಾದರೂ ಯಾಕೆ ಮಾಡಿಕೊಳ್ಳಬೇಕಿತ್ತು ಎಂದು ಪರಾರಿಯಾಗಿರುವ ಆಕೆಯ ಮೇಲೆ ಹರಿಹಾಯ್ದರು.
ಶೌಚಾಲಯ ನಿರ್ವಾಹಕ ಮಹೇಶ ಎಂಬಾತನು ನೀರನ್ನು ಹಾಕಲು ಹೋದಾಗ ಶೌಚಾಲಯದ ಗುಡ್ಡಿಯಲ್ಲಿ ಮಣ್ಣು ತುಂಬಿರುವುದನ್ನು ನೋಡಿ ಅದನ್ನು ಶುಚಿಗೊಳಿಸಲು ನೀರನ್ನು ಹಾಕಿದಾಗ ಅಲ್ಲಿ ಆಗತಾನೆ ಹುಟ್ಟಿ ಮೃತಪಟ್ಟಿರುವ ಮಗುವಿನ ಶವ ಕಾಣಿಸಿದೆ.
ಸುದ್ದಿ ತಿಳಿಯುತ್ತಲೆ ನಗರ ಫೊಲೀಸ್ ಠಾಣೆಯ ಪಿಎಸ್‌ಐ ಯಾತನೂರ ಅವರು ತಮ್ಮ ಸಿಬ್ಬಂದಿಯೊಡನೆ ಸ್ಥಳಕ್ಕೆ ಧಾವಿಸಿ ಪರಿಶಿಲಿಸಿ ಪ್ರಕರಣ ದಾಖಲಿಸಿಕೊಂಡರು. ಕರುಳ ಕುಡಿಯನ್ನು ನಿರ್ದಯವಾಗಿ ಬಿಸಾಕಿ ಹೋಗಿರುವ ಮಹಿಳೆಯ ಹುಡುಕಾಟದಲ್ಲಿದ್ದಾರೆ.












Click it and Unblock the Notifications