ಎಸ್ ಜೆಪಿ ಬಸ್ ಸ್ಟಾಪ್ ದುರವಸ್ಥೆ ಹೇಳತೀರದು

ನಮ್ಮಂಥ ಬಡವರಿಗೆ ಮಕ್ಕಳನ್ನು ಡೈಲಿ ಆಟೊ ರಿಕ್ಷಾದಲ್ಲಿ ಕಳುಹಿಸಲು ಆಗುವುದಿಲ್ಲ. ಸಾಯಂಕಾಲ ಪಾಪ ಗಾರ್ಮೆಂಟ್ಸ್ ಫ್ಯಾಕ್ಟರಿಯಿಂದ ಬರುವವರಿಗೆ ಬಸ್ ಸಿಗುತ್ತಿಲ್ಲ. 5.45 ಕ್ಕೆ ತುಂಬಾ ಜನ ನಡೆದೇ ಹೋಗುತ್ತಾರೆ. ಅಥವಾ ರಿಕ್ಷಾದಲ್ಲಿ ಹೋಗುತ್ತಾರೆ. ಮತ್ತೆ ಬಸ್ಸುಗಳು ಬಂದರೆ ಒಟ್ಟೊಟ್ಟಿಗೆ ಬರುತ್ತದೆ. ಏನು ಭಾಗ್ಯ!?
ಅದ್ದರಿಂದ ತಾವು ನಮ್ಮ ಕಡೆಗೆ ಬರುವ 341b ಬಸ್ಸಿನ ಸಾಯಂಕಾಲದ ಸಮಯವನ್ನು ಶಾಲಾ ಮಕ್ಕಳಿಗೆ ಮತ್ತು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡಬೇಕಾಗಿ ಕೇಳಿ ಕೊಳುತ್ತೇನೆ. - ಬಿಜಿ Anil
ಎಸ್ ಜೆಪಿ ಬಸ್ ಸ್ಟಾಪ್ ದುರವಸ್ಥೆ ಹೇಳತೀರದು: ಎಸ್ ಜೆ ಪಾಲಿಟೆಕ್ನಿಕ್ ಬಸ್ ಸ್ಟಾಪ್ ದುರವಸ್ಥೆ ಹೇಳತೀರದಾಗಿದೆ. ರಸ್ತೆಯ ಮಧ್ಯೆಯೇ ಬಸ್ಸುಗಳು ನಿಲ್ಲುತ್ತಿವೆ. ಇವಕ್ಕೆ ಒಂದು ರೀತಿ ನೀತಿ ಅಂತಿಲ್ಲ. ಇದರ ಉಸ್ತುವಾರಿಗೆ ಒಬ್ಬ ಟಿಸಿಯನ್ನು ಇಲ್ಲಿ ನಿಯೋಜಿಸಿ.- ಮೂರ್ತಿ
ಕೊಟ್ಟಿಗೆ ಪಾಳ್ಯದಿಂದ ಬನಶಂಕರಿಗೆ ಮತ್ತು ತಾವರೆಕೆರೆಯಿಂದ ಬನಶಂಕರಿಗೆ ನೇರ ಬಸ್ ಸಂಪರ್ಕ ಕಲ್ಪಿಸಿ. - ಕಾವ್ಯ ಜಿ.












Click it and Unblock the Notifications