ಶೆಟ್ಟರ್ ಆಗಲಿಲ್ಲ ಡಿಸಿಎಂ; ಯಡಿಯೂರಪ್ಪ ಮೇಲುಗೈ

ಈ ಸಂಬಂಧ ಬಿಜೆಪಿ ವರಿಷ್ಠರು ತಮ್ಮ ನಿರ್ಧಾರವನ್ನು ಈಗತಾನೇ ಸ್ಪಷ್ಟಪಡಿಸಿದ್ದು, ಜಗದೀಶ ಶೆಟ್ಟರ್ ಅವರಿಗೆ ಡಿಸಿಎಂ ಪಟ್ಟ ಇಲ್ಲವೆಂದು ಹೇಳಿದೆ. ಇದರಿಂದ, ಎರಡು ಉಪ ಮುಖ್ಯಮಂತ್ರಿ ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದ ಅನಂತಕುಮಾರ್ ಬಣಕ್ಕೆ ತೀವ್ರ ನಿರಾಸೆಯಾಗಿದ್ದು, ಒಂದು ಸ್ಥಾನವೂ ದಕ್ಕಿಲ್ಲ.
ದೇಶದಲ್ಲಿನ ಬಿಜೆಪಿ ಆಡಳಿತವಿರುವ (ಸಮ್ಮಿಶ್ರ ಸರ್ಕಾರ ಹೊರತುಪಡಿಸಿ) ಇತರ ರಾಜ್ಯಗಳಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿ ಮಾಡದೇ ಇರುವುದರಿಂದ ಕರ್ನಾಟಕದಲ್ಲಿ ಹೊಸ ಪದ್ಧತಿ ಹುಟ್ಟುಹಾಕಲು ಸಾಧ್ಯವಿಲ್ಲ ಎಂದು ಬಿಜೆಪಿ ವರಿಷ್ಠರು ಹಿಂದೇಟು ಹಾಕಿದ್ದಾರೆ.
ಉಪ ಮುಖ್ಯಮಂತ್ರಿ ಸ್ಥಾನವಂತೂ ಕೈತಪ್ಪಿತು. ಇನ್ನು, ಹೆಚ್ಚಿನ ಸಂಖ್ಯೆಯ ಸಚಿವ ಸ್ಥಾನಗಳಿಗೆ ಮತ್ತು ಪ್ರಮುಖ ಖಾತೆಗಳಿಗೆ ಅನಂತ್ ಬಣ ಬೇಡಿಕೆ ಇಡುವ ಸಾಧ್ಯತೆಗಳು ಹೆಚ್ಚಾಗಿವೆ.












Click it and Unblock the Notifications