ಮತ ಎಣಿಕೆ ಮುಕ್ತಾಯ, ಫಲಿತಾಂಶ ಕೆಲವೇ ಕ್ಷಣಗಳಲ್ಲಿ

ಇದೀಗ ಬಂದಿರುವ ಸುದ್ದಿ : ಕರ್ನಾಟಕದ 26ನೇ ಮುಖ್ಯಮಂತ್ರಿಯಾಗಿ ಉಡುಪಿ-ಚಿಕ್ಕಮಗಳೂರು ಸಂಸದ ಡಿವಿ ಸದಾನಂದ ಗೌಡ ಅವರು ಆಯ್ಕೆಯಾಗಿದ್ದಾರೆ. ಇದರಿಂದ ಯಡಿಯೂರಪ್ಪನವರಿಗೇ ಭಾರೀ ಬಲ ದೊರೆತಂತಾಗಿದೆ. [ಸದಾನಂದ ಗೌಡ ವ್ಯಕ್ತಿಚಿತ್ರ]
ಕೆಎಸ್ ಈಶ್ವರಪ್ಪ ಬೆಂಬಲಿತ ಜಗದೀಶ್ ಶೆಟ್ಟರ್ ಮತ್ತು ಬಿಎಸ್ ಯಡಿಯೂರಪ್ಪ ಬೆಂಬಲಿತ ಡಿವಿ ಸದಾನಂದ ಗೌಡ ಅವರ ಸಮ್ಮುಖದಲ್ಲಿಯೇ ಮತ ಎಣಿಕೆಯ ಕಾರ್ಯ ಆರಂಭವಾಗಿತ್ತು. ಮತ ಎಣಿಕೆಯಲ್ಲಿ ಗೋಲ್ ಮಾಲ್ ಆಗಬಾರದು ಎಂಬ ಕಾರಣದಿಂದ ಊಟವನ್ನೂ ಬಿಟ್ಟು ಇಬ್ಬರೂ ಅಭ್ಯರ್ಥಿಗಳು ಮತಎಣಿಕೆಗೆ ಕುಳಿತಿದ್ದರು.
ಒಮ್ಮತದ ಅಭ್ಯರ್ಥಿ ಆಯ್ಕೆಯಾಗದಿದ್ದರಿಂದ ನಡೆದಿರುವ ಗುಪ್ತ ಮತದಾನದಲ್ಲಿ ಹಂಗಾಮಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಸೇರಿ 117 ಶಾಸಕರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಯಾರ ಬಲ ಎಷ್ಟಿದೆ? ಯಾರ ಕೊರಳಿಗೆ ಜಯಮಾಲೆ ಬೀಳಲಿದೆ ಎಂಬುದು ಕೆಲವೇ ಕ್ಷಣಗಳಲ್ಲಿ ದೊರೆಯಲಿದೆ.











Click it and Unblock the Notifications