ಮುಖ್ಯಮಂತ್ರಿ ಕುರ್ಚಿ: ಇಬ್ಬರ ಜಗಳದಲ್ಲಿ 3 ನೇಯವನಿಗೆ ಲಾಭ?

ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಂತರ ಹೊಸ ನಾಯಕನ ಘೋಷಣೆಯಾಗಲಿದೆ. ಕೇಂದ್ರದ ನಾಯಕರು ಸರ್ವ ಸಮ್ಮತದ ಅಭ್ಯರ್ಥಿಯನ್ನು ಹುಡುಕುವಲ್ಲಿ ವಿಫಲರಾಗಿದ್ದಾರೆ. ಎರಡು ಬಣಗಳ ಕಿತ್ತಾಟದ ಬಗೆಹರಿಯದಿದ್ದರೆ, ಮೂರನೇ ವ್ಯಕ್ತಿಯನ್ನು ಆರಿಸುವ ಸಾಧ್ಯತೆ ನಿಚ್ಚಳವಾಗಿದೆ.
ಎರಡು ಉಪ-ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಸಾಧ್ಯತೆ ಇದ್ದು, ಸದಾನಂದ ಗೌಡ, ಜಗದೀಶ ಶೆಟ್ಟರ್‌ಗೆ ಡೆಪ್ಯೂಟಿ ಸಿಎಂ ಹುದ್ದೆ ಲಭಿಸುವ ಸಂಭವ ಹೆಚ್ಚಿದೆ. ಆಗ ಸಾಧಾರಣ ಬಹುಮತದ ಅನಂತ್ ಸಿಎಂ ಸ್ಥಾನಕ್ಕೇರಲಿದ್ದಾರೆ. ಕೆಎಸ್ ಈಶ್ವರಪ್ಪ ರಾಜ್ಯಾಧ್ಯಕ್ಷರಾಗಿಯೇ ಮುಂದುವರಿಯಲಿದ್ದಾರೆ.
ತಟಸ್ಥ ನಾಯಕನ ಆಯ್ಕೆ?: ಎರಡೂ ಬಣದ ನಾಯಕರನ್ನು ಬದಿಗೊತ್ತಿ ಯಾವ ಗುಂಪಿಗೂ ಸೇರದ ಸುರೇಶ್ ಕುಮಾರ್, ಗೋವಿಂದ ಕಾರಜೋಳ ಅಥವಾ ವಿಎಸ್ ಆಚಾರ್ಯ ಅವರಿಗೆ ಹೊಸ ಜವಾಬ್ದಾರಿ ಸಿಕ್ಕರೂ ಆಶ್ಚರ್ಯವಿಲ್ಲ. ಏನಾದರೂ ಯಡಿಯೂರಪ್ಪ ಅವರ ಸಚಿವ ಸಂಪುಟ ಸಂಪೂರ್ಣ ಬದಲಾಗಲಿದ್ದು, ಸಿಎಂ ಆಯ್ಕೆಗೆ ಮುನ್ನ ಸಚಿವ ಸ್ಥಾನಕ್ಕೂ ಲಾಬಿ ನಡೆಯುತ್ತಿದೆ.












Click it and Unblock the Notifications