ಯಡಿಯೂರಪ್ಪ ಮೇಲೆ ಬಾಂಬ್ ಎಸೆದ ಭಾರದ್ವಾಜ್
ಬೆಂಗಳೂರು,
ಆಗಸ್ಟ್ 03: ನೂತನ ಮುಖ್ಯಮಂತ್ರಿ ಆಯ್ಕೆ ಕಸರತ್ತು ನಡೆದಿರುವ ಘಳಿಗೆಯಲ್ಲೇ ರಾಜಭವನದಿಂದ ಹಂಸರಾಜ್ ಭಾರದ್ವಾಜ್ ಅವರು ಹಠಾತ್ತಾಗಿ ಬಾಂಬ್ ಹಾಕಿದ್ದಾರೆ. id="toptextpromo">ಹಿಂದಿನ
ಲೋಕಾಯುಕ್ತರು ಸಲ್ಲಿಸಿರುವ ಅಕ್ರಮ ಗಣಿಗಾರಿಕೆ ವರದಿಯನ್ನು ಆಧರಿಸಿ ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅಪರಾಧ ಪ್ರಕರಣ ದಾಖಲಿಸುವುದಕ್ಕೆ ಅನುಮತಿ ನೀಡಿದ್ದಾರೆ. ಶಾಸಕಾಂಗ ಸಭೆ ನಡೆಯುತ್ತಿರುವ ಕ್ಯಾಪಿಟಲ್ ಹೋಟೆಲ್ ರಾಜಭವನದಿಂದ ಕಲ್ಲೆಸೆತದ ದೂರದಲ್ಲಿದೆ. ರಾಜ್ಯಪಾಲರು ಎಸೆದಿರುವ ಬಾಂಬು ಶಾಸಕಾಂಗ ಸಭೆಯಲ್ಲಿ ಭಾರಿ ಸ್ಫೋಟವುಂಟುಮಾಡುವುದು ಖಚಿತ. ಇದನ್ನು ಮನಗಂಡೇ ರಾಜ್ಯಪಾಲರು ಸರಿಯಾದ ಸಮಯಕ್ಕೆ ಬಾಂಬ್ ಎಸೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಪರ ದೃಢವಾಗಿ ನಿಂತಿರುವ ಶಾಸಕರು, ಸಚಿವರು ಸ್ಫೋಟದಿಂದ ಛಿದ್ರಗೊಳ್ಳುವ ಸಾಧ್ಯತೆ ಇದೆ. ಹ್ಯಾಗೂ ಇಯಪ್ಪನ (ಯಡಿಯೂರಪ್ಪ) ವಿರುದ್ಧ ನಾಳೆ ಕೋರ್ಟಿನಲ್ಲಿ ಕೇಸು ನಿಂತು ಮನೆಗೆ ಹೋಗುವುದು ಗ್ಯಾರಂಟಿ. ಆದ್ದರಿಂದ ಯಡಿಯೂರಪ್ಪ ಅವನ್ನು ಬೆಂಬಲಿಸುವುದರಲ್ಲಿ 'ಅರ್ಥವಿಲ್ಲ' ಎಂದು ಅರ್ಥೈಸಿಕೊಂಡು ಯಡ್ಡಿ ಪಾಳಯ ತೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ವ್ಯಾಖ್ಯಾನಿಸಲಾಗಿದೆ. ಫಲಿತಾಂಶಕ್ಕಾಗಿ ದಟ್ಸ್ ಕನ್ನಡ ನೋಡುತ್ತಿರಿ...











Click it and Unblock the Notifications