ನನ್ನ ಮಗನಿಗೆ ಮೋಸ, ಶೆಟ್ಟರ್ ತಾಯಿಯ ಅಳಲು
ಬೆಂಗಳೂರು,
ಆ. 03 : "ನನ್ನ ಮಗ ಮುಖ್ಯಮಂತ್ರಿಯಾಗದಂತೆ ಮಾಡಿದ್ದೇ ಬಿಎಸ್ ಯಡಿಯೂರಪ್ಪ ಅವರು" ಎಂದು ಕೇವಲ 7 ಮತಗಳ ಅಂತರದಿಂದ ಮುಖ್ಯಮಂತ್ರಿ ಪಟ್ಟ ಕಳೆದುಕೊಂಡ ಜಗದೀಶ್ ಶೆಟ್ಟರ್ ಅವರ ತಾಯಿ ಬಸವಣ್ಣೆಮ್ಮ ಅವರು ಅಳಲು ತೋಡಿಕೊಂಡಿದ್ದಾರೆ. id="toptextpromo">"ಹಿಂದೆ
ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗಬೇಕಾಗಿದ್ದಾಗ ಕೂಡ ಸಿಗದಂತೆ ತಡೆದವರೇ ಯಡಿಯೂರಪ್ಪ. ಯಡಿಯೂರಪ್ಪನವರು ಮನಸು ಮಾಡಿದ್ದರೆ ಮಗನಿಗೆ ಮೊದಲೇ ಮಂತ್ರಿ ಸ್ಥಾನ ಸಿಗಬೇಕಾಗಿತ್ತು" ಎಂದು ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>"ಮುಂದೊಂದು
ದಿನ ಮಗ ಸಿಎಂ ಆಗೇ ಆಗುತ್ತಾನೆ. ಶಿವನ ಕೃಪೆ ಅವನ ಮೇಲಿದೆ" ಎಂದು ಭಾವುಕರಾಗಿ ಅವರು ನುಡಿದರು. ಸದಾನಂದ ಮುಖ್ಯಮಂತ್ರಿ ಆಗಿದ್ದು ಬೇಜಾರಿಲ್ಲ. ಆತ ಕೂಡ ನನ್ನ ಮಗನಂತೆ ಎಂದು ಮಾತೃಭಾವವನ್ನು ಅವರು ಮೆರೆದರು. ಯಡಿಯೂರಪ್ಪ ಮಾಡಿದ್ದನ್ನು ಶಿವ ಮೆಚ್ಚುವನೆ?











Click it and Unblock the Notifications