ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು-ಶಿರಡಿ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭ

By Mahesh
|
Google Oneindia Kannada News

Mysore Sai Nagar Shirdi Train
ಮೈಸೂರು, ಆ. 2: ಬಹುದಿನ ಬೇಡಿಕೆಯಾಗಿದ್ದ ಮೈಸೂರು ಹಾಗೂ ಶಿರಡಿ ನಡುವಿನ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಸೋಮವಾರ ನೈಋತ್ಯ ರೈಲ್ವೆ ಇಲಾಖೆಯ ಸಂಚಾರಿ ವಿಭಾಗಧಿಕಾರಿ ಎಂಸಿ ಅನಿತಾ ಅವರು ಹಸಿರು ನಿಶಾನೆ ತೋರಿದರು. ಮೈಸೂರಿನಿಂದ ಸುಮಾರು 1,304 ಕಿ.ಮೀ ಅಂತರದ ದೂರ ಸಾಗುವ ಈ ರೈಲು ವಾರದಲ್ಲಿ ಒಮ್ಮೆ ಮಾತ್ರ ಸಂಚರಿಸಲಿದೆ.

ಮಾರ್ಗ ಹೀಗಿದೆ: ಪ್ರತಿ ಸೋಮವಾರ ಬೆಳಗ್ಗೆ 9:50ಕ್ಕೆ ಮೈಸೂರು ನಿಲ್ದಾಣದಿಂದ ರೈಲು ಹೊರಡಲಿದೆ, ಬೆಂಗಳೂರು, ಧರ್ಮಾವರಂ, ಗುಂತಕಲ್, ಬಳ್ಳಾರಿ, ಹೊಸಪೇಟೆ, ಗದಗ, ಬಿಜಾಪುರ, ಸೋಲಾಪುರ ಮತ್ತು ದಾಂಡ್ ಮಾರ್ಗವಾಗಿ ಸಾಗಲಿದೆ. ಮರುದಿನ ಮಂಗಳವಾರ ಮಧ್ಯಾಹ್ನ 2:15ಕ್ಕೆ ಶಿರಡಿಯ ಸಾಯಿನಗರವನ್ನು ತಲುಪಲಿದೆ.

ಶಿರಡಿಯಿಂದ ಮಂಗಳವಾರ ಮಧ್ಯಾಹ್ನ 3:50ಕ್ಕೆ ಸಾಯಿನಗರವನ್ನು ಬಿಟ್ಟು ಅದೇ ಮಾರ್ಗದಲ್ಲಿ ವಾಪಸ್ ಆಗಿ ಬುಧವಾರ ರಾತ್ರಿ 10:55ಕ್ಕೆ ಮೈಸೂರಿಗೆ ಬರಲಿದೆ.

ಟಿಕೆಟ್ ದರ: ಎಸಿ 2-ಟೈರ್: 1,456 ರು. ಎಸಿ 3-ಟೈರ್: 1,057 ರು, ಸ್ಲೀಪರ್ ಸೆಕೆಂಡ್ ಕ್ಲಾಸ್: 386 ರು. ಹಾಗೂ ಸಾಮಾನ್ಯ ಸೆಕೆಂಡ್ ಕ್ಲಾಸ್ 206 ರು.

English summary
Mysore-Sai Nagar Shirdi Express train to run as weekly special train and cover distance of around 1,304 Km said South Western Railway Transport head MC Anita last day after inaugurating the new train service in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X