ಡಿವಿಎಸ್ ರನ್ನು ಸಿಎಂ ಮಾಡಿ ಇಲ್ಲವೇ ಸಾಮೂಹಿಕ ರಾಜೀನಾಮೆ

ಯಡಿಯೂರಪ್ಪ ಅವರು ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಿ ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಮತ್ತೊಮ್ಮೆ ಒತ್ತಾಯ ಹೇರುತ್ತಿದ್ದಾರೆ. ಅವರ ಬೇಡಿಕೆಯನ್ನು ಮನ್ನಿಸದಿದ್ದರೆ ಯಡಿಯೂರಪ್ಪ ಬೆಂಬಲಿತ ಸುಮಾರು 70ಕ್ಕೂ ಅಧಿಕ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ. ಶಾಸಕರು ತಮ್ಮ ರಾಜೀನಾಮೆಯನ್ನು ಸ್ಪೀಕರ್ ಗೆ ಫ್ಯಾಕ್ಸ್ ಮಾಡಲು ಸಹ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ
ಹೋಟೆಲ್ ಲಲಿತ್ ಅಶೋಕ್ ನಲ್ಲಿ ಅನಂತ್ ಹಾಗೂ ಯಡಿಯೂರಪ್ಪ ಬಳಗ ತಂತ್ರಗಾರಿಕೆ ಕದನ ನಡೆಸಿದೆ. ಈಶ್ವರಪ್ಪ, ಅನಂತ್ ಕುಮಾರ್ ಹಾಗೂ ಜಗದೀಶ್ ಶೆಟ್ಟರ್ ಅವರು ಕೂಡಾ ಸಿಎಂ ಸ್ಥಾನ ಆಕಾಂಕ್ಷಿಗಳಾಗಿದ್ದು, ಹೈಕಮಾಂಡ್ ಜತೆಯಲ್ಲಿ ಚರ್ಚೆ ನಡೆಸಿದ್ದಾರೆ.
ಈಶ್ವರಪ್ಪ ಹಾಗೂ ಅನಂತ್ ಬಳಗದ ಒತ್ತಡ ತಂತ್ರ ಜಾಲದಲ್ಲಿ ಸಿಲುಕಿರುವ ಹೈಕಮಾಂಡ್ 'ಅತ್ತ ದರಿ ಇತ್ತ ಪುಲಿ' ಎಂಬ ಪರಿಸ್ಥಿತಿಯಲ್ಲಿದೆ. ಎಲ್ಲವೂ ಯಡಿಯೂರಪ್ಪ ಅಂದುಕೊಂಡಂತೆ ಆದರೆ, ಸಂಜೆ ಅರುಣ್ ಜೇಟ್ಲಿ ಪತ್ರಿಕಾಗೋಷ್ಠಿ ನಡೆಸಿ ಹೊಸ ನಾಯಕನ ಆಯ್ಕೆ ಪ್ರಕಟಿಸಲಿದ್ದಾರೆ.
ಇಲ್ಲದಿದ್ದರೆ 8 ಗಂಟೆಗೆ ನಿಗದಿಯಾಗಿರುವ ವಿಮಾನ ಏರಿ ದೆಹಲಿಗೆ ತೆರಳಲಿದ್ದಾರೆ. ಆಗ ಕರ್ನಾಟಕದ ಮುಂದಿನ ಸಿಎಂ ಆಯ್ಕೆ ಜವಾಬ್ದಾರಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ಸಮಕ್ಷಮದಲ್ಲಿ ಆಗಲಿದೆ.












Click it and Unblock the Notifications