ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಸಾರಥ್ಯದಲ್ಲಿ ಕರ್ನಾಟಕ ಜನತಾ ಪಕ್ಷ ರಚನೆ?

By Srinath
|
Google Oneindia Kannada News

jaitly, bsy
ಬೆಂಗಳೂರು, ಜುಲೈ 30: ಆಯ್ತು ರಾಜೀನಾಮೆ ನೀಡ್ತೀನಿ ಎಂದು ತಣ್ಣಗೆ ವರಿಷ್ಠರ ಮುಂದೆ ತಲೆದೂಗಿ ಬಂದ ಯಡಿಯೂರಪ್ಪ ಅವರು ತಮ್ಮ ಮನದಾಳದ ಬಯಕೆಯನ್ನು ಹೊರಹಾಕಿದ್ದಾರೆ. ಇಂದು-ನಾಳೆ ಆಷಾಢ ಅಮಾವಾಸ್ಯೆಯ ಕರಿನೆರಳು ಅಂತ್ಯವಾಗುತ್ತಿದ್ದಂತೆ ತಮ್ಮ ಸಾರಥ್ಯದಲ್ಲಿ ಕರ್ನಾಟಕ ಜನತಾ ಪಕ್ಷ (KJP) ರಚಿಸುವುದಾಗಿ ನಿರ್ಗಮಿತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಸಂದೇಶ ರವಾನಿಸಿದ್ದಾರೆ.

ಹಣ ಬಲ, ತೋಳ್ಬಲ ನನ್ನ ಬಳಿಯಿರುವಾಗ ನಾನ್ಯಾಕೆ ಹೈಕಮಾಂಡಿನ ಗೊಡ್ಡು ಬೆದರಿಕೆಗೆ ಮಣಿಯಲಿ. 70 ಸಾಸಕರು, ಸಚಿವರು, ಹತ್ತಾರು ಸಂಸದರು ನನ್ನ ಬೆನ್ನ ಹಿಂದಿದ್ದಾರೆ. ಎಂದಿನಂತೆ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರವನ್ನು ಬಲವಾಗಿ ನೆಚ್ಚಿಕೊಂಡಿರುವ ಯಡಿಯೂರಪ್ಪ ಇಂದೋ ನಾಳೆಯೋ ಹೊಸ ಪಕ್ಷ ಸ್ಥಾಪನೆ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.

ಇದು ಬಿಜೆಪಿ ಹೈಕಮಾಂಡಿಗೆ ಹೊಸ ತಲೆಬಿಸಿ ತಂದಿದೆ. ಈ ಮಧ್ಯೆ, ಹೊಸ ನಾಯಕನ ಸಂಬಂಧ ಅಭಿಪ್ರಾಯ ಸಂಗ್ರಹಿಸಬೇಕಾಗಿದೆ ಅಶೋಕ ಹೋಟೆಲಿಗೆ ಬನ್ನಿ ಎಂದು ಪಕ್ಷದ ಶಾಸಕರಿಗೆ ಹೈಕಮಾಂಡ್ ಸೂಚಿಸಿದ್ದರೂ ಯಡಿಯೂರಪ್ಪ ನಿಷ್ಠರು ಆ ಕಡೆ ತಲೆಯೇ ಹಾಕಿಲ್ಲ. ಯಡಿಯೂರಪ್ಪ ಅವರಿಗೇ ನಮ್ಮ ನಿಷ್ಠೆ ಎಂದು ಬಹಿರಂಗವಾಗಿಯೇ ಘೋಷಿಸಿದ್ದಾರೆ. ಜತೆಗೆ, ಯಡಿಯೂರಪ್ಪ ಆಪ್ತರು ನೂತನ ಪಕ್ಷ ಕಟ್ಟುವ ಕಾರ್ಯದಲ್ಲಿ ಇತರೆ ಪಕ್ಷಗಳ ಶಾಸಕರ ಮೇಲೆ ಕಣ್ಣು ಹಾಕಿದ್ದು, ಸಮಾನಮನಸ್ಕರ ಓಲೈಕೆ ಕಸರತ್ತು ನಡೆಸಿದ್ದಾರೆ.

English summary
As BJP High command didn't to agree any of his demands BS Yeddyurappa is all set to form a new Karnataka Janatha Paksha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X