ಶೋಭಾ-ಯಡ್ಡಿಗೆ ಹಂಗೂ ಮೋಸ ಹಿಂಗೂ ಮೋಸ
ಬೆಂಗಳೂರು,
ಜುಲೈ 30: ಶೋಭಾ ಕರಂದ್ಲಾಜೆಗೆ ಮುಖ್ಯಮಂತ್ರಿ ಪಟ್ಟ, ತಮಗೆ ರಾಜ್ಯಾಧ್ಯಕ್ಷರ ಸ್ಥಾನ ನೀಡಬೇಕು ಎಂದು ಯಡಿಯೂರಪ್ಪ ಷರತ್ತು ವಿಧಿಸಿದ್ದಾರೆ ಎಂಬುದೆಲ್ಲ ಸುಳ್ಳು. ಅವರ ಬೇಳೆ ಕಾಳೂ ಏನೂ ಇಲ್ಲ; ಹೈಕಮಾಂಡಿನದೇ ಅಂತಿಮ ನಡೆ. ಅವರು ಸೂಚಿಸುವ ವ್ಯಕ್ತಿಯೇ ಕರ್ನಾಟಕದ ಮಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಕೆ. ಎಸ್. ಈಶ್ವರಪ್ಪ ಸೂಚ್ಯವಾಗಿ ಹೇಳಿದ್ದಾರೆ. id="toptextpromo">ಕರ್ನಾಟಕ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ರಾಜೀನಾಮೆಗೆ ಮಹೂರ್ತ ಫಿಕ್ಸ್ ಮಾಡುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ವರಿಷ್ಠರು ಮತ್ತೊಂದು ಗೆಲುವಿನ ನಗೆ ಬೀರಿದ್ದಾರೆ. ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರ ಯಾವುದೇ ಷರತ್ತಿಗೆ ಮಣೆ ಹಾಕುವುದಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಪಕ್ಷದ ಮೂಲಗಳು ಹೇಳಿವೆ. id='are-slot-1' class='oiad oi-axt oiadv'> id='top-searched-articles'>ಈ
ಮದ್ಯೆ, ಯಡಿಯೂರಪ್ಪ ಅವರು ಯಾವುದೇ ಷರತ್ತು ವಿಧಿಸಿರಲಿಲ್ಲ. ಅದೆಲ್ಲ ಮಾಧ್ಯಮಗಳ ಕಟ್ಟುಕತೆ. ರಾಜೀನಾಮೆ ನೀಡಲು ಯಡಿಯೂರಪ್ಪ ಅವರು ಆಷಾಢ ಮುಗಿಯುವುದಕ್ಕಾಗಿ ಕಾಯುತ್ತಿದ್ದಾರೆ ಎನ್ನುವುದೂ ಮಾಧ್ಯಮಗಳ ಸೃಷ್ಟಿ ಎಂದು ಅಶೋಕ್, ಶೆಟ್ಟರ್, ರಾಮದಾಸ್, ಅನಂತಕುಮಾರ್ ಪಟಾಲಂ ಮಧ್ಯೆ ರಾರಾಜಿಸುತ್ತಿದ್ದ ಈಶ್ವರಪ್ಪ ಕಿಡಿಕಾರಿದ್ದಾರೆ.











Click it and Unblock the Notifications