ಮಂತ್ರಾಲಯ ಗುರು ರಾಘವೇಂದ್ರ ಸ್ವಾಮೀಜಿ 340 ನೇ ಆರಾಧನೆ

340th Aradhana Mahotsava of Sri Raghavendra Swamiji
ರಾಯಚೂರು ಜು 26: ಕಲಿಯುಗದ ಪರಮ ಗುರು ಶ್ರೀರಾಘವೇಂದ್ರತೀರ್ಥರ 340ನೇ ಆರಾಧನೆಯು ಮಂತ್ರಾಲಯದಲ್ಲಿ ಅಗಸ್ಟ್ 12ರಿಂದ ಏಳುದಿನಗಳ ಪರ್ಯಂತ ಆಚರಿಸಲ್ಪಡುತ್ತದೆ. ಸಪ್ತರಾತ್ರೋತ್ಸವ ಎಂದು ಇದಕ್ಕೆ ಹೆಸರು.

ಶ್ರೀಮಠದ ಪೀಠಾಧಿಪತಿ ಸುಯತೀಂದ್ರ ತೀರ್ಥರ ನೇತೃತ್ವದಲ್ಲಿ ಅ.12 ರಿಂದ ಅ.18ರ ವರೆಗೂ ನಡೆಯುವ ಆರಾಧನಾ ಮಹೋತ್ಸವದಲ್ಲಿ ಆರಾಧನಾ ಜ್ಞಾನ ಸತ್ರ, ಶ್ರೀ ರಾಘವೇಂದ್ರ ಪ್ರಶಸ್ತಿ(ಈ ಬಾರಿ ಸೂರ್ಯನಾರಾಯಣ ರೆಡ್ಡಿ ಅವರಿಗೆ ಸಲ್ಲಲಿದೆ), ಸಂಗೀತ ಕಾರ್ಯಕ್ರಮ, ಮಹಾ ರಥೋತ್ಸವ, ಉತ್ತರಾಧನೆ ಜೊತೆಗೆ ಸುಜ್ಞಾನೇಂದ್ರ ತೀರ್ಥರ 150ನೇ ಆರಾಧನೆಯೂ ಜರುಗಲಿದೆ.

ಮಧ್ಯಾರಾಧನೆ ಮಹೋತ್ಸವವನ್ನು ಬೆಳಗ್ಗೆ 8 ಗಂಟೆ ಯಿಂದ ಮಧ್ಯಾಹ್ನ 12 ಗಂಟೆವರೆಗೂ ಈಟಿವಿ ಹಾಗೂ ಸುವರ್ಣ ಕನ್ನಡ ವಾಹಿನಿಯಲ್ಲಿ ನೇರವಾಗಿ ಪ್ರಸಾರ ಮಾಡಲಾಗುವುದು. ಜ್ಞಾನಯಜ್ಞ ಹಾಗೂ ಪಂಚಾಮೃತ ಅಭಿಷೇಕವನ್ನು ಶ್ರೀಮಠದ ವೆಬ್ ಸೈಟ್ ನಲ್ಲಿ ನೇರ ವೆಬ್ ಕ್ಯಾಸ್ಟ್ ಮಾಡಲಾಗುವುದು.

ಚಾತುರ್ಮಾಸ : ಮಂತ್ರಾಲಯ ಶ್ರೀಮಠದ ಪೀಠಾಧಿಪತಿಗಳಾದ ಶ್ರೀಸುಯತೀಂದ್ರತೀರ್ಥರು ಜು.28ರಿಂದ ಚಾತುರ್ಮಾಸ್ಯ ದೀಕ್ಷೆಯನ್ನು ಸ್ವೀಕರಿಸಿಸಲಿದ್ದಾರೆ. ಇದು 48ದಿನಗಳ ವ್ರತ. ಈ ಸಂದರ್ಭದಲ್ಲಿ ಭಾರತೀಯ ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ವೇದಾಂತವನ್ನು ಇಷ್ಟಪಡುವ ಜನರಿಗೆ ಇದು ನಿಜಕ್ಕೂ ಸಂತೋಷವನ್ನು ತರುವ ವಿಷಯ. ಈ ಸಂದರ್ಭದಲ್ಲಿ ಮಂತ್ರಾಲಯಕ್ಕೆ ಬಂದು ಮಧ್ವಶಾಸ್ತದ ಅಧ್ಯಯನ ಮಾಡುವ ಭಕ್ತರಿಗೆ ಅಲ್ಪಾವಧಿಯ ತರಗತಿಗಳನ್ನು ಮಂತ್ರಾಲಯದಲ್ಲಿ ಏರ್ಪಡಿಸಲಾಗಿದೆ. ಇದು ಮಾತ್ರವಲ್ಲದೆ ಇನ್ನು ಹಲವು ಆಸಕ್ತಿಕರ ಕಾರ್ಯಕ್ರಮಗಳು ಈ ಅವಧಿಯಲ್ಲಿ ನಡೆಯಲಿವೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ರಾಘವೇಂದ್ರ ಮಠದ ವೆಬ್ ಸೈಟ್ ಅನ್ನು ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+