ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿಗಳ ಹೈಡ್ರಾಮಾ ಶುರು‌: ಸುಷ್ಮಾಗೆ ಪ್ರಧಾನಿಪಟ್ಟದ ಆಮಿಷ

By Srinath
|
Google Oneindia Kannada News

yeddyurappa, janardhana reddy,
ಬೆಂಗಳೂರು, ಜುಲೈ25: ಲೋಕಾಯುಕ್ತರ ಗಣಿ ವರದಿಯ ಪ್ರವಾಹದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೊಚ್ಚಿಹೋದರೆ ಅವರ ಸಂಗಡ ತಾವೂ ಕೊಚ್ಚಿಹೋಗುತ್ತೇವೆ ಎಂಬ ಆತಂಕಕ್ಕೆ ಸಿಲುಕಿರುವ ಬಳ್ಳಾರಿ ಗಣಿ ರೆಡ್ಡಿಗಳು, ಅವರನ್ನು ರಕ್ಷಿಸಲು ಎಲ್ಲ ಲೈಫ್ ಜಾಕೆಟ್ ಗಳನ್ನೂ ಬಳಸುತ್ತಿದ್ದಾರೆ.

ತಮ್ಮ ಮಾತೃಸ್ವರೂಪಿಯೂ ಆದ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್‌ ಮೂಲಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸದಂತೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

ಇದಕ್ಕಾಗಿ ಸುಷ್ಮಾ ಅವರಿಗೆ ಮುಂದಿನ ಪ್ರಧಾನಿಯಾಗುವ ಸಂದರ್ಭವನ್ನು ಮನವರಿಕೆ ಮಾಡಿಕೊಡುವ ಯತ್ನ ನಡೆದಿದೆ. ಅಂದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸ್ಥಾನಗಳನ್ನು ಗೆ‌ಲ್ಲಬೇಕಾದರೆ ಯಡಿಯೂರಪ್ಪ ಅವರ ನಾಯಕತ್ವ ಬೇಕೇ ಬೇಕಾಗುತ್ತದೆ.

ಈ ದೃಷ್ಟಿಕೋನದಿಂದ ಚಿಂತನೆ ನಡೆಸುವ ಮೂಲಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮುಂದುವರಿಸುವ ಬಗ್ಗೆ ಪ್ರಯತ್ನ ನಡೆಸುವಂತೆ ಗಣಿ ರೆಡ್ಡಿಗಳು ಸುಷ್ಮಾಗೆ ಕಿವಿಮಾತು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತರ ಗಣಿ ವರದಿಯ ಸೋರಿಕೆಯಲ್ಲಿ ಯಡಿಯೂರಪ್ಪ ಅವರ ಜತೆ ಸಚಿವರಾದ ಗಾಲಿ ಜನಾರ್ದನರೆಡ್ಡಿ, ಗಾಲಿ ಕರುಣಾಕರರೆಡ್ಡಿ ಹಾಗೂ ಬಿ.ಶ್ರೀರಾಮುಲು ಅವರ ಹೆಸರೂ ಪ್ರಸ್ತಾಪವಾಗಿರುವುದರಿಂದ ಗಣಿ ರೆಡ್ಡಿಗಳು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ತೀವ್ರ ಸೆಣಸಾಟ ಆರಂಭಿಸಿದ್ದಾರೆ. ಇದುವರೆಗೆ ಸುಷ್ಮಾ ಸ್ವರಾಜ್‌ ಅವರನ್ನು ರೆಡ್ಡಿ ಸಹೋದರರು ನೇರವಾಗಿ ಭೇಟಿ ಮಾಡಲು ಸಾಧ್ಯವಾಗದಿದ್ದರೂ ತಮ್ಮ ಆಪ್ತರ ಮೂಲಕ ಮನವಿ ರವಾನಿಸಿದ್ದಾರೆ ಎನ್ನಲಾಗಿದೆ.

English summary
In the back drop of Lokayukta Justice Santosh Hegde illegal mining report indicting CM Yeddyurappa inturn fearing sacking of all og them, Bellary Reddy brothers are persuing Sushma Swaraj as PM candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X