ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾನುವಾರ ಬೆಂಗಳೂರಿನಲ್ಲಿ Lake-A-Thon. ಏನಿದು ?

By Mahesh
|
Google Oneindia Kannada News

United Way Bengaluru LAKE-A-THON campaign Bangalore
ಬೆಂಗಳೂರು ಜು 22: ಕೆರೆಗಳ ಪರಿಸರ ಮಾಲಿನ್ಯ, ಹೂಳೆತ್ತುವುದು, ಕೆರೆಗಳ ಸ್ಥಿತಿ ಗತಿಗಳ ಬಗ್ಗೆ ಜಾಗೃತಿ ಮೂಡಿಸಲು ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ಲೇಕ್ ಎ ಥಾನ್ ಎಂಬ ಮಾರ್ನಿಂಗ್ ವಾಕ್ ಆಯೋಜಿಸಿದೆ.

ಭಾನುವಾರ(ಜು.31)ರಂದು ಬೆಳಗ್ಗೆ 7 ಗಂಟೆಗೆ ಸರ್ಜಾಪುರ ರಸ್ತೆಯ ಬಳಿ ಇರುವ ಕೈಕೊಂಡನ ಹಳ್ಳಿ ಕೆರೆದಂಡೆ ಮೇಲೆ ಕುಟುಂಬ ಸಮೇತ ಮಾರ್ನಿಂಗ್ ವಾಕ್ ನಡೆಸಲಾಗುವುದು. ಟೋಟಲ್ ಮಾಲ್ ಸಮೀಪವಿರುವ ಈ ಕೆರೆಯನ್ನು ಉಳಿಸಲು ಪಣ ತೊಟ್ಟಿರುವ ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ಹೆಚ್ಚು ಜನರನ್ನು ಅಂದು ಸೇರಿಸುವ ಉತ್ಸಾಹದಲ್ಲಿದೆ.

ಕೆರೆ ಸಂರಕ್ಷಣೆ ಬಗ್ಗೆ ಕಾಳಜಿವುಳ್ಳ ನಾಗರೀಕರು ಸಂಸ್ಥೆಯ ವೆಬ್ ಸೈಟ್ ನಲ್ಲಿ ನೋಂದಾಯಿಸಿಕೊಂಡು ಭಾಗವಹಿಸಬಹುದು. ನಿಮ್ಮ ಬಡಾವಣೆಯಲ್ಲೂ ಕೂಡಾ ಹಾಳಾಗುತ್ತಿರುವ ಕೆರೆಯ ಆರೋಗ್ಯವನ್ನು ರಕ್ಷಿಸಿ ನಿಮ್ಮ ಆರೋಗ್ಯವನ್ನು ಸರಿಪಡಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಶಿರೀನ್ ಕುರಿಯನ್ ಅವರಿಗೆ ಇಮೇಲ್ ಮಾಡಿ ಅಥವಾ 080- 41150394 ಗೆ ಕರೆ ಮಾಡಿ. ಸಂಸ್ಥೆಯ ಫೇಸ್ ಬುಕ್ ಪುಟಕ್ಕೂ ಭೇಟಿ ನೀಡಿ

ನಿಮ್ಮ ಗಮನಕ್ಕೆ: 1937ರಲ್ಲಿ ಬೆಂಗಳೂರಿನಲ್ಲಿ ಸರಿ ಸುಮಾರು 937 ಕೆರೆಗಳಿದ್ದ್ದವು. 2010ರ ವೇಳೆಗೆ ಈ ಸಂಖ್ಯೆ 212ಕ್ಕೆ ಇಳಿಯಿತು. ನಗರೀಕರಣ ಹೆಚ್ಚಾದಂತೆ ಕೆರೆಗಳ ಮೇಲೆ ಮನೆ, ಮಾಲ್, ಬಸ್ ನಿಲ್ದಾಣ, ಹೋಟೆಲ್ ಗಳು ಎದ್ದವು. ವಿಶ್ವ ಆರೋಗ್ಯ ಸಂಸ್ಥೆ ದಾಖಲೆ ಪ್ರಕಾರ 2020 ರ ವೇಳೆಗೆ ಬೆಂಗಳೂರಿನ ಪ್ರತಿ ನಾಗರೀಕರಿಗೆ ಪ್ರತಿನಿತ್ಯ 78ಲೀಟರುಗಳು ಮಾತ್ರ ಲಭ್ಯವಾಗಲಿದೆ.

ಆದರೆ ಬೆಂಗಳೂರಿನ ನಾಗರೀಕರ ದೈನಂದಿನ ನೀರಿನ ಅಗತ್ಯತೆ 150 ಲೀಟರುಗಳಷ್ಟಿದೆ. ಸಾವನಂಚಿನಲ್ಲಿರುವ ಅನೇಕ ಕೆರೆಗಳನ್ನು ಉಳಿಸಲು ಬಿಬಿಎಂಪಿ ಜಾಗೃತಿ ಅಭಿಯಾನ ಆರಂಭಿಸಿದ್ದು, ಅದಕ್ಕೆ ಅನೇಕ ಸರ್ಕಾರೇತರ ಸಂಸ್ಥೆಗಳು ಕೈ ಜೋಡಿಸಿದೆ.

English summary
United Way Bengaluru has organised LAKE-A-THON on Sunday, 31st July, 07.00 am at Kaikondanahalli Lake, on Sarjapura Road close to Total Mall, Bangalore.To register at uwbengaluru website and participate in Lake Rejuvenation Campaign. BBMP also requested citizens to create awareness and rejuvenate the Dying Lakes in Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X