ತಿರುಪತಿ ತಿಮ್ಮಪ್ಪನ ಮೇಲೆ ಉಗ್ರರ flash?
ತಿರುಪತಿ,
ಜುಲೈ 22: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಆಶ್ಚರ್ಯಕರ, ಆಕಸ್ಮಿಕ, ಅಚಾತುರ್ಯ ಘಟನೆಯೊಂದು ಗುರುವಾರ ನಡೆದಿದೆ. ಏನಪಾ ಅಂದರೆ ವೆಂಕಟರಮಣಸ್ವಾಮಿ ವಿಗ್ರಹದ ಮೇಲೆ ಬಲಭಾಗದಲ್ಲಿ ಫಳ್ಳನೆ ಬೆಳಕು ಹಾದುಹೋಗಿದೆ. ಪಕ್ಕದ ಚಿತ್ರದಲ್ಲಿ ಇದನ್ನು ನೀವೂ ಗಮನಿಸಬಹುದು. id="toptextpromo">ಇದು
ದೇವಸ್ಥಾನದ ರಕ್ಷಣೆಯಲ್ಲಿರುವ ಪೊಲೀಸರಿಗೆ ತಲೆಬಿಸಿ ತಂದಿದೆ. ತಿಮ್ಮಪ್ಪನ ಮೇಲೆ ಈ ಬೆಳಕು ಪ್ರಜ್ವಿಲಿಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಭಕ್ತರು ಕ್ಯಾಮರಾದಿಂದ ಫೋಟೋ ತೆಗೆದಾಗ ಈ ಬೆಳಕು ಮೂಡಿರಬಹುದೆಂದು ತರ್ಕಿಸಲಾಗಿದೆ. ಆದರೆ ಗರ್ಭಗುಡಿಯಲ್ಲಿ ತಿಮ್ಮಪ್ಪನ ಫೋಟೋ ತೆಗೆಯುವುದನ್ನು ನಿಷೇಧಿಸಲಾಗಿದೆ. ವಾಸ್ತವವಾಗಿ ಮೂಲ ವಿಗ್ರಹದ ಒಂದೇ ಒಂದು ಫೋಟೋವನ್ನು ಸುಮಾರು ವರ್ಷಗಳ ಹಿಂದೆ ಬ್ಲ್ಯಾಕ್ ಅಂಡ್ ವೈಟ್ ಜಮಾನಾದಲ್ಲಿ ತೆಗೆಯಲಾಗಿದೆ. id='are-slot-1' class='oiad oi-axt oiadv'> id='top-searched-articles'>ಆದರೆ
ಭದ್ರತಾಲೋಪವಾಗಿ ಉಗ್ರರ ಕರಿನೆರಳು ಇದಾಗಿರಬಹುದಾ ಎಂದೂ ಆಲೋಚಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಂಧ್ರದ ಡಿಜಿಪಿ ಶುಕ್ರವಾರ ದೇವಸ್ಥಾನಕ್ಕೆ ತೆರಳಿ ಪರಿಶೀಲನೆಯನ್ನು ನಡೆಸಿದ್ದಾರೆ. ಇಂತಹ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ಪೊಲೀಸರು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿಗೆ ಅಭಯ ನೀಡಿದ್ದಾರೆ.











Click it and Unblock the Notifications