ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ರಾಜೀನಾಮೆ ನೀಡುವುದಿಲ್ಲ: ಧನಂಜಯ್ ಕುಮಾರ್

By Mahesh
|
Google Oneindia Kannada News

ಬೆಂಗಳೂರು, ಜು.22: ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗಿದ್ದಾರೆ ಎಂದು ಮಾಧ್ಯಮ ವರದಿ ಆಧಾರಿಸಿ, ಸಿಎಂ ರಾಜೀನಾಮೆಗೆ ವಿಪಕ್ಷಗಳು ಒತ್ತಾಯಿಸುತ್ತಿದೆ.

ಸೋರಿಕೆಯಾದ ವರದಿ ಆಧಾರದ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ನೇರವಾಗಿ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ದೆಹಲಿ ಪ್ರತಿನಿಧಿ ಧನಂಜಯ್ ಕುಮಾರ್ ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಉದಾಹರಣೆ ಕೊಟ್ಟ ಧನಂಜಯ್, ಅಲ್ಲಿನ ಲೋಕಾಯುಕ್ತರು ಶೀಲಾ ದೀಕ್ಷಿತ್ ವಿರುದ್ಧ ಮಾಡಿರುವ ಆರೋಪ, ವರದಿಯನ್ನು ಕಾಂಗ್ರೆಸ್ ತಿರಸ್ಕರಿಸಿದೆ. ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲೂ ಲೋಕಾಯುಕ್ತ ವರದಿಗೆ ಕಾಂಗ್ರೆಸ್ ಸರ್ಕಾರ ಸೊಪ್ಪುಹಾಕಿಲ್ಲ. ಕಾಂಗ್ರೆಸ್ ಗೆ ಒಂದು ಮಾನದಂಡ, ಬಿಜೆಪಿಗೆ ಒಂದು ಮಾನದಂಡ ಏಕೆ ಎಂದು ಧನಂಜಯ್ ಪ್ರಶ್ನಿಸಿದ್ದಾರೆ. [ವಿಡಿಯೋ:ಯಡಿಯೂರಪ್ಪ ಆರೋಪಿ]

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ದಂತೆ ಲೋಕಾಯುಕ್ತರು ತಯಾರಿಸಿರುವ ಎರಡನೇ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆ ಆಗುವ ಮೊದಲೇ ಸೋರಿಕೆ ಆಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿದೆ. ವರದಿ ಈಗ ತನ್ನ ಪಾವಿತ್ರ್ಯತೆ ಕಳೆದುಕೊಂಡಿದೆ. ಫೋನ್ ಟ್ಯಾಪಿಂಗ್ ನಿಜವಾದರೆ ಲೋಕಾಯುಕ್ತರು ದೂರು ನೀಡಲಿ ಸಮಗ್ರ ತನಿಖೆ ನಡೆಸಲಿ ಎಂದು ಧನಂಜಯ್ ಕುಮಾರ್ ಹೇಳಿದ್ದಾರೆ.

English summary
Lokayukta report on Illegal Mining leak:Karnataka Chief Minister Yeddyurappa won't resign says Karnataka's Delhi representative Dhananjay Kumar. Lokayukta report is not yet presented officially. Depending on media reports Yeddyurappa can't resign said Dhananjay.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X