ಗೃಹಿಣಿಗೆ ಮಂಕುಬೂದಿ ಎರಚಿ ರೇಪ್ ಮಾಡಿ, ರೇಟ್ ಹೇಳು ಎಂದ್ರು!

ವೇಣೂರು ಸಮೀಪದ ಪಡ್ಡಂದಡ್ಕದ ಗಾಂಧಿನಗರದಲ್ಲಿ ಎರಡು ದಿನಗಳ ಹಿಂದೆ ನಡೆದ ಘಟನೆಯಿಂದ ಶಾಕ್ ಗೆ ಒಳಗಾಗಿದ್ದ ಮಹಿಳೆ ನಿನ್ನೆ ರಾತ್ರಿ ತನ್ನ ಗೋಳಿನ ಕಥೆಯನ್ನು ಹೇಳಿಕೊಂಡಿದ್ದಾಳೆ.
ಪಡ್ಡಂದಡ್ಕ ಮೂರು ಮಕ್ಕಳ ತಾಯಿಯಾಗಿರುವ ಮಹಿಳೆಯನ್ನು ಗಂಟಾಲ್‌ಕಟ್ಟೆ ಸಮೀಪದ ನೌಶಾದ್ ಮತ್ತು ಫಾರೂಕ್ ಸೋಮವಾರ ಗಂಟಾಲ್‌ಕಟ್ಟೆಗೆ ಕರೆದುಕೊಂಡು ಹೋಗಿ, ಅಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರಲ್ಲಿ ಅತ್ಯಾಚಾರ ಎಸೆಗಿದ್ದಾರೆ.
ಆಘಾತಗೊಂಡಿದ್ದ ಮಹಿಳೆ ಸದ್ಯ ಎಸ್ ಸಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಲೆ. ರಾತ್ರಿ ವೇಳೆ ಘಟನೆಯನ್ನು ಪತಿಗೆ ವಿವರಿಸಿದ್ದಾಳೆ. ಮಹಿಳೆಯ ಪತಿ ನಿನ್ನೆ ಮೂಡಬಿದ್ರೆ ಠಾಣೆ ಎಸ್ ಐ ರಮೇಶ್ ಕುಮಾರ್ ಗೆ ದೂರು ನೀಡಿದ್ದಾರೆ. ಮೂಡುಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಘಟನೆ ವಿವರ : ಪಡ್ಡಂದಡ್ಕ ನಿವಾಸಿಯಾಗಿರುವ ವಿವಾಹಿತ ಮಹಿಳೆ ತನ್ನ ನೆರೆಮನೆಯ ಯುವತಿ ಸಮೀನಾ ಎಂಬಾಕೆಗೆ ಕಾರ್ಯಕ್ರಮಕ್ಕೆ ಹೋಗಲು ತನ್ನ ಚಿನ್ನಾಭರಣಗಳನ್ನು ನೀಡಿದ್ದರು. ಆದರೆ ಚಾಲಾಕಿ ಸಮೀನಾ ಅದನ್ನು ಫೈನಾನ್ಸ್‌ನಲ್ಲಿ ಅಡವಿಟ್ಟು ಅದರಲ್ಲಿ ಬಂದ ಹಣವನ್ನು ರಿಯಾಜ್ ಎನ್ನುವಾತನಿಗೆ ಬಡ್ಡಿಗೆ ನೀಡಿದ್ದಳು.
ಕಳೆದ ಆರು ತಿಂಗಳಿಂದ ತನ್ನ ಚಿನ್ನಾಭರಣಕ್ಕಾಗಿ ಅಲೆದಾಡಿದ ಮಹಿಳೆಗೆ ಸಮೀನಾ ಒಂದಲ್ಲ ಒಂದು ನೆಪವೊಡ್ಡಿ ಆಕೆಯನ್ನು ಸಾಗಹಾಕುತ್ತಿದ್ದಳು. ಇದರಿಂದ ಬೇಸತ್ತ ವಿವಾಹಿತ ಮಹಿಳೆ ಒಂದು ವಾರದ ಹಿಂದೆ ಪಂಚಾಯಿತಿ ನಡೆಸಿದ್ದು ಫಲ ಕೊಡಲಿಲ್ಲ. ಈ ವೇಳೆ ವಿವಾಹಿತ ಮಹಿಳೆಯನ್ನು ನೋಡಿದ್ದ ನೌಶಾದ್ ಮತ್ತು ಫಾರೂಕ್ ಉಪಾಯದಿಂದ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಪೊಲೀಸರಿಗೆ ತಿಳಿಸಿದರೆ ಚೆನ್ನಾಗಿರಲ್ಲ ಅಂತ ಜೀವ ಬೆದರಿಕೆ ಒಡ್ಡಿದ್ದಾರೆ.












Click it and Unblock the Notifications