ಅನಂತ ನಿಧಿ ಬಾಗಿಲ ಕೀಲಿ ಕೈ ಸುಂದರ ರಾಜನ್ ಸಾವು

ಶತಮಾನಗಳಿಂದ ಯಾರ ಕಣ್ಣಿಗೂ ಬೀಳದಂತಿದ್ದ ಅಷ್ಟೈಶ್ವರ್ಯ ನಿಧಿ, ಕಳ್ಳ ಕಾಕರ ಪಾಲಾಗುತ್ತಿದೆ. ಟ್ರಸ್ಟ್ ನ ಅಧಿಕಾರಿಗಳು ಕೊಳ್ಳೆ ಹೊಡೆಯುವ ಸಾಧ್ಯತೆಯಿದೆ.ಆದ್ದರಿಂದ ನಿಧಿ ಇರುವ ಕೋಣೆಯ ಬಾಗಿಲು ತೆಗೆಯುವಂತೆ ಸುಂದರರಾಜನ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ಈ ಮೂಲಕ ಟ್ರಸ್ಟ್ ನ ಅವ್ಯವಹಾರದ ಮೂಲ ಹುಡುಕಿ ಹೋದಾಗ, ಸುವರ್ಣ ನಿಧಿ ಸಂಪತ್ತಿನ ಹೆಬ್ಬಾಗಿಲು ತೆರೆದುಕೊಂಡಿತ್ತು. ಇಲ್ಲಿ ತನಕ ಸಿಕ್ಕಿರುವ ಲೆಕ್ಕದ ಪ್ರಕಾರ ದೇಗುಲ ನಿಧಿ ಮೊತ್ತ ಲಕ್ಷ ಕೋಟಿಯನ್ನು ಮೀರುತ್ತಿದೆ.
ವಿಡಿಯೋ: ದೇವಸ್ಥಾನದ ಸಂಪ್ರದಾಯ ಅಲಂಕಾರ|ಪದ್ಮನಾಭ ಸ್ವಾಮಿಯ ವೈಭೋಗ
ಸುಂದರರಾಜನ್ ಯಾರು?: 1964 ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ಸುಂದರರಾಜನ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಅಪ್ತ ರಂಗರಕ್ಷಕ ಸಿಬ್ಬಂದಿ ಪಡೆಯ ಸದಸ್ಯರಾಗಿದ್ದರು. ಭದ್ರತಾ ಪಡೆ ಕೆಲಸ ಬಿಟ್ಟು, ಕಾನೂನು ವ್ಯಾಸಂಗ ಮಾಡಲು ಸುಂದರರಾಜನ್ ತೆರಳಿದರು. ನಿಧಿಯ ಅಸಲಿ ಮಾಲೀಕರಾದ ತಿರುವಾಂಕೂರು ರಾಜಮನೆತನಕ್ಕೆ ಸುಂದರರಾಜನ್ ಅವರ ಕುಟುಂಬ ತಲೆತಲಾಂತರದಿಂದ ಕಾನೂನು ಸಲಹೆಗಾರರಾಗಿದ್ದಾರೆ.
ಸುಂದರರಾಜನ್ ಅವರು ಪಿಐಎಲ್ ಅನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್, ನಿಧಿ ರಹಸ್ಯ ಹೊರಗೆಳೆಯುವಂತೆ ಆದೇಶಿಸಿತ್ತು. ಬಿ ಕೋಣೆಯನ್ನು ತೆರೆಯುವ ಮೊದಲು ದೇವಪ್ರಶ್ನೆ ಕೇಳಬೇಕೆಂದು ರಾಜಮನೆತನದವರು ಸಲಹೆ ಮಾಡಿದ್ದಾರೆ. ಸುಪ್ರೀಂಕೋರ್ಟ್ ಕೂಡಾ ತೀರ್ಪು ವಿಳಂಬ ಮಾಡುತ್ತಿದೆ. ಈ ಮಧ್ಯೆ ಸುಂದರರಾಜನ್ ಅವರ ಸಾವಿನೊಂದಿಗೆ ಹಲವು ಊಹಾಪೋಹಗಳು ಏಳುವ ಸಾಧ್ಯತೆಗಳಿವೆ.












Click it and Unblock the Notifications