ವಿಮಾನದಲ್ಲಿ ದೋಷ: ಹೆದರಿ ಕೆಳಗಿಳಿದ 14 ಪ್ರಯಾಣಿಕರು

ತಾಂತ್ರಿಕ ದೋಷ ಕಂಡುಬಂದ ವೇಳೆ ಸ್ವಯಂಚಾಲಿತವಾಗಿ ಸೈರನ್ ಮೊಳಗಿದ್ದು, ಇದರಿಂದ ಭೀತರಾದ ಮೂವರು ಪ್ರಯಾಣಿಕರು ತತ್‌ಕ್ಷಣ ವಿಮಾನದಿಂದ ಕೆಳಗಿಳಿದು ಹೋದರು. ಸ್ವಲ್ವ ಸಮಯದ ಬಳಿಕ ಇನ್ನೂ 11 ಮಂದಿ ಕೆಳಗಿದರು.
ವಿಮಾನದಲ್ಲಿ ಒಟ್ಟು 169 ಮಂದಿ ಪ್ರಯಾಣಿಕರಿದ್ದರು. ಪರಿಣಿತರ ತಂಡ ತಾಂತ್ರಿಕ ದೋಷವನ್ನು ಸರಿಪಡಿಸಿದ ಮೇಲೆ ಮುಂಬೈಗೆ ಹಾರಾಟ ನಡೆಸಿತು, ಆದರೆ ಹೆದರಿ ವಿಮಾನದಿಂದ ಇಳಿದವರು ಮಾತ್ರ ಪ್ರಯಾಣ ಮುಂದುವರಿಸಲಿಲ್ಲ, ಅವರನ್ನು ಬಿಟ್ಟು ವಿಮಾನ ಮುಂಬಯಿಗೆ ಪ್ರಯಾಣ ಮುಂದುವರಿಸಿತು.
ಶನಿವಾರ ಪ್ರಯಾಣಿಸದ 14 ಮಂದಿ ಭಾನುವಾರ ಜೆಟ್ ಏರ್ ವೇಸ್ ವಿಮಾನದಲ್ಲಿ ಮುಂಬಯಿಗೆ ತೆರಳಲಿದ್ದಾರೆ ಎಂದು ವಿಮಾನ ನಿಲ್ದಾಣ ಕಚೇರಿಯ ಮೂಲಗಳು ತಿಳಿಸಿವೆ.












Click it and Unblock the Notifications