ಟಿವಿ9 ನೋಡಿದಿರಾ? ನಿತ್ಯಾನಂದ ಭಕ್ತರ ಕಪ್ಪೆ ಕುಣಿತ ಬೊಂಬಾಟ್!
ಬೆಂಗಳೂರು,
ಜುಲೈ 15: ಸ್ವಾಮಿ ನಿತ್ಯಾನಂದರು ಗುರುಪೂರ್ಣಿಮೆ ನಿಮಿತ್ತ ತಮ್ಮ ಬಿಡದಿ ಆಶ್ರಮದಲ್ಲಿ ಭರ್ಜರಿ ಪೂಜಾಕೈಂಕರ್ಯಗಳನ್ನು ಹಮ್ಮಿಕೊಂಡಿದ್ದಾರೆ. ಅದರಲ್ಲಿ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಪುರುಷರು ಭಾಗವಹಿಸಿದ್ದಾರೆ. ಚಿತ್ರ ವಿಚಿತ್ರದ ಭಾವಭಂಗಿಗಳಲ್ಲಿ ಮೈಮರೆಯುತ್ತಿರುವ ಭಕ್ತರು ನಿತ್ಯಾನಂದರಲ್ಲಿ ಭಕ್ತಿಯ ಪರಾಕಾಷ್ಠೆ ಕಾಣುತ್ತಿದ್ದಾರೆ. ಕಪ್ಪೆ ಕುಣಿತವಂತೂ ಅಮೋಘವಾಗಿದೆ. id="toptextpromo">ನಟಿ
ರಂಜಿತಾ ಉಪಸ್ಥಿತಿ ವಿಶೇಷ ಆಕರ್ಷಣೆಯಾಗಿದ್ದು, ನೇರಳೆ ಬಣ್ಣದ ಸೀರೆಯುಟ್ಟಿದ್ದ ರಂಜಿತಾ ಅವರ ಕಪ್ಪೆ ಕುಣಿತ 'ನೋಡಲೆರಡು ಕಣ್ಣುಗಳು ಸಾಲದಮ್ಮಾ' ಎನ್ನುವಂತಿದ್ದವು. ಇನ್ನೂ ಅನೇಕ ಪುರುಷ ಮತ್ತು ಮಹಿಳಾ ಭಕ್ತರು ಕುಳಿತಲ್ಲಿಂದಲೇ ಕಪ್ಪೆಯಂತೆ ಜಿಗಿ ಜಿಗಿದು ಕುಣಿಯುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದನ್ನು
ಬೆಳಗ್ಗೆ 11 ಗಂಟೆಯಿಂದ 'ಟಿವಿ9 ನ್ಯೂಸ್ ಚಾನಲ್' ಯಥಾವತ್ತಾಗಿ ಅಂದರೆ ಲೈವ್ ಆಗಿ ಪ್ರಸಾರ ಮಾಡುತ್ತಿದೆ. ಆಶ್ರಮದಾಚೆಗೆ ಅಂದರೆ ಟಿವಿ9 ನೋಡಿದವವರು ಇದರ ಬಗ್ಗೆಯೇ ಚರ್ಚೆ ನಡೆಸುತ್ತಿದ್ದಾರೆ. ಸ್ನೇಹಿತರಿಗೂ ಫೋನ್ ಮಾಡಿ ಟಿವಿ9 ನೋಡುವಂತೆ ಹೇಳುತ್ತಿದ್ದಾರೆ. ನೀವೂ ಒಮ್ಮೆ ನೋಡಿ ಆನಂದಿಸಿ.











Click it and Unblock the Notifications