ನಾರಾಯಣಮೂರ್ತಿ ಇಂದ ದೇಶದ ಜನತೆಗೆ ಆರೋಗ್ಯ ಭಾಗ್ಯ
ನವದೆಹಲಿ,
ಜೂನ್ 12: ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ (PHFI) ಅಧ್ಯಕ್ಷರಾಗಿ ಸೋಮವಾರ ಆಯ್ಕೆಯಾಗಿದ್ದಾರೆ. ಈ ಪ್ರತಿಷ್ಠಾನ ದೇಶದಾದ್ಯಂತ ಸಾರ್ವಜನಿಕ ಆರೋಗ್ಯ ಶಾಲೆಗಳನ್ನು ತೆರೆಯಲಿದೆ. id="toptextpromo">ಜತೆಗೆ
ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿವಿಧ ತರಬೇತಿ ಮತ್ತು ಶಿಬಿರಗಳನ್ನು ನಡೆಸಲಿದೆ. ಈ ಹಿಂದೆ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ರಜತ್ ಗುಪ್ತ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮೂರ್ತಿ ಆಯ್ಕೆಯಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮಾರ್ಚ್
ತಿಂಗಳಿನಲ್ಲಿ ಗುಪ್ತ ರಾಜೀನಾಮೆ ನೀಡಿದ್ದರಿಂದ ಡಾ. ವೈ.ವಿ.ರೆಡ್ಡಿ ಅವರು ತಾತ್ಕಾಲಿಕವಾಗಿ PHFI ಚುಕ್ಕಾಣಿ ಹಿಡಿದಿದ್ದರು. ನಾರಾಯಣ ಮೂರ್ತಿ ಅವರು, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಅಮರ್ಥ್ಯ ಸೇನ್, ಶಿವ್ ನಾಡರ್, ಟಿ.ಕೆ.ನಾಯರ್, ವೈ.ವಿ.ರೆಡ್ಡಿ, ಎ.ಕೆ.ಶಿವಕುಮಾರ್ ಮತ್ತು ಮಿರಾಯ್ ಚಟರ್ಜಿ ಅವರನ್ನು ಒಳಗೊಂಡ ಆಡಳಿತ ಮಂಡಳಿಯ ನೇತೃತ್ವ ವಹಿಸಲಿದ್ದಾರೆ.











Click it and Unblock the Notifications