'ಸಾಯಿ' ಕೇಂದ್ರದಲ್ಲಿ ಉದ್ದೀಪನ ಮದ್ದು ವ್ಯಾಪಕ ಬಳಕೆ ಪತ್ತೆ
ಬೆಂಗಳೂರು,
ಜುಲೈ 12: ನಗರದ ಹೊರವಲಯದಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ (ಸಾಯಿ) ದಕ್ಷಿಣ ಕೇಂದ್ರದಲ್ಲಿ ಅಥ್ಲೀಟ್‌ಗಳು ಯಾವುದೇ ಎಗ್ಗಿಲ್ಲದೆ ಉದ್ದೀಪನ ಔಷಧಗಳನ್ನು ವ್ಯಾಪಕವಾಗಿ ಬಳಸುತ್ತಿರುವುದು ಬೆಳಕಿಗೆ ಬಂದಿದೆ. id="toptextpromo">ರಾಷ್ಟ್ರೀಯ
ಉದ್ದೀಪನ ಮದ್ದು ತಡೆ ಘಟಕದ (ನಾಡಾ) ಅಧಿಕಾರಿಗಳು ಎಸ್‌ಎಐ ದಕ್ಷಿಣ ಕೇಂದ್ರದಲ್ಲಿ ದಾಳಿ ನಡೆಸುವ ವೇಳೆ ವೇಟ್‌ಲಿಫ್ಟರುಗಳು ವಾಸ್ತವ್ಯ ಹೂಡಿರುವ ಹಾಸ್ಟೆಲ್ ಹಿಂಬದಿ ಶಕ್ತಿಯನ್ನು ಹೆಚ್ಚಿಸುವ ಕೆಲ ಔಷಧಗಳು ಪತ್ತೆಯಾಗಿರುವುದು ಇದಕ್ಕೆ ಇಂಬು ನೀಡುತ್ತಿದೆ. ದುಬಾರಿ ಬೆಲೆಯಸೊಮಟ್ರೊಪಿನ್ ಇನ್‌ಜೆಕ್ಷನ್ ಸಹ ಪತ್ತೆಯಾಗಿದ್ದು ಇದನ್ನು ಹಾರ್ಮೊನ್ ಬೆಳವಣಿಗೆಗೆ ಬಳಸುತ್ತಾರೆ ಎಂದು ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ಇದೇ
ವೇಳೆ, ದಾಳಿ ನಡೆಸುವಾಗ ಕೆಲ ಅಥ್ಲೀಟ್‌ಗಳು ಕೊಠಡಿಯಿಂದ ಪರಾರಿಯಾಗಲು ಯತ್ನಿಸಿರುವುದು ತಿಳಿದು ಬಂದಿದೆ. ಇನ್ನು ಕೆಲವರು ಆರಂಭದಲ್ಲಿ ಕೊಠಡಿ ಬಾಗಿಲನ್ನೇ ತೆಗೆಯಲಿಲ್ಲ. ನಾಲ್ಕು ಕೊಠಡಿಗಳಿಂದ ಸಂಶಯಾಸ್ಪದ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಬೆಂಗಳೂರು ಕೇಂದ್ರ ಹಾಗೂ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಈ ಪಿಡುಗು ಹೆಚ್ಚಾಗಿದೆ ಎಂದು ಭಾನುವಾರವಷ್ಟೇ ನವದೆಹಲಿ ಎಸ್‌ಎಐ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಎಸ್.ಎಮ್.ಚಂದ್ರನ್ ನುಡಿದಿದ್ದರು.











Click it and Unblock the Notifications