ಎಸಿ ಕಾರು ಬಿಟ್ಟು ಆಟೋ ಏರಿದ ಶಾಸಕನನ್ನು ಕಂಡಿರಾ?

Malaka Reddy rides auto in Yadgir
ಯಾದಗಿರಿ, ಜು. 11 : ಹವಾನಿಯಂತ್ರಿತ ಕಾರುಗಳಲ್ಲಿ ಜುಮ್ಮಂತ ತಿರುಗಾಡುವ ಶಾಸಕರು ರಸ್ತೆಗಳು ಹೇಗಿವೆ ಎಂದು ತಿಳಿಯುವುದಕ್ಕಾಗಲಿ, ಜನರ ಸಂಕಷ್ಟಗಳನ್ನು ಅರಿಯುವುದಕ್ಕಾಗಲಿ ಆಟೋ ಅಥವಾ ಬಸ್ಸು (ವೋಲ್ವೊ ಬಿಟ್ಟು) ಏರಿದ ನಿದರ್ಶನ ಕಂಡಿದ್ದೀರಾ?

ಆ ಕೆಲಸವನ್ನು ಯಾದಗಿರಿ ಶಾಸಕ ಡಾ. ಎಬಿ ಮಾಲಕರೆಡ್ಡಿ ಮಾಡಿದ್ದಾರೆ, ಅದೂ ಪತ್ರಕರ್ತರು ಬಲವಂತ ಮಾಡಿದ್ದಕ್ಕೆ. ಹೀಗೆ ಆಟೋ ಹತ್ತಿದ ಮಾಲಕರೆಡ್ಡಿ ಊರೆಲ್ಲ ಸುತ್ತಾಡಿದರು, ಯಮಸ್ವರೂಪಿ ರಸ್ತೆಗಳ ಸಾಕ್ಷಾತ್ ದರ್ಶನ ಪಡೆದರು. ಹತ್ತಿಕುಣಿ ಕ್ರಾಸ್‌ನಲ್ಲಿ ರಸ್ತೆಯ ತಗ್ಗೊಂದರಲ್ಲಿ ಆಟೋ ಇಳಿದಾಗ ಶಿವಶಿವ ಎಂದು ಶಂಕರನ ಸ್ಮರಣೆ ಮಾಡಿದರು.

ತಮಾಷೆಯೆಂದರೆ, ಜನರೆಡೆಗೆ ಕೈಬೀಸಿ ನಮಸ್ಕರಿಸುತ್ತಿದ್ದ ಶಾಸಕರನ್ನು ಪ್ರಪ್ರಥಮ ಬಾರಿಗೆ ಆಟೋದಲ್ಲಿ ಕಂಡ ಸಾರ್ವಜನಿಕರೇ ಕಕ್ಕಾಬಿಕ್ಕಿಯಾದರು. ದಿನವೂ ಈ ರಸ್ತೆಯಲ್ಲಿ ಸಂಚರಿಸಿದರೆ ಚೆನ್ನಾಗಿರುತ್ತದೆ ಎಂದು ಹಾರೈಸಿದರು. ಆಟೋ ಚಾಲಕರು ಈ ಹಾಳು ಬಿದ್ದ ರಸ್ತೆಗಳನ್ನೇ ನಂಬಿ ಅಟೋ ಓಡಿಸಬೇಕಿದೆ.

ನಂತರ ಮಾತನಾಡಿದ ಶಾಸಕ ಮಾಲಕರೆಡ್ಡಿ, ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದು ರಸ್ತೆಯ ಸ್ಥಿತಿಗಳ ಬಗ್ಗೆ ಅವರ ಜೊತೆ ಚರ್ಚಿಸುವುದಾಗಿ ಹೇಳಿದರು. ಅಲ್ಲದೇ ರಾಜ್ಯ ಸರ್ಕಾರ ಸರಿಯಾಗಿ ಶಾಸಕರಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+