ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಎಸ್ ಸಿಲಿಂಡರ್: ಸರ್ಕಾರ ಮೊಬೈಲ್ ಕಂಪೆನಿಯ ದಲ್ಲಾಳಿಯೇ

By * ಕೊಡಗಿನ ಸೀತಮ್ಮ, ಬೆಂಗಳೂರು
|
Google Oneindia Kannada News

shobha karandlaje
ಇತ್ತೀಚೆಗೆ ಅಡುಗೆ ಅನಿಲ ಬಳಕೆದಾರರಿಗೆ ತಾವು ನಿಜವಾದ ಬಳಕೆದಾರರು ಎಂಬುದನ್ನು ಸಾಬೀತುಪಡಿಸಲು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಿಸಿದ ಕೀರ್ತಿಗೆ ಪಾತ್ರರಾದ ಮಂತ್ರಿ ಶೋಭಾ ಕರಂದ್ಲಾಜೆಯವರು, ಈಗ ಇದೇ ಬಳಕೆದಾರರಿಗೆ ಅಡುಗೆ ಅನಿಲದ ಸಿಲಿಂಡರುಗಳನ್ನು ಬುಕ್ ಮಾಡಲು ಹರಸಾಹಸ ಮಾಡುವಂತೆ ಮಾಡಿ ತಾವೆಷ್ಟು ಜನಸಾಮಾನ್ಯರಿಂದ ದೂರವಾಗಿದ್ದಾರೆ ಹಾಗೂ ಸರ್ಕಾರದ ಬಿಳಿಯಾನೆಗಳಾದ ಐಎಎಸ್ ಅಧಿಕಾರಿಗಳ ಕೈಗೊಂಬೆ ಎಂಬುದನ್ನು ಸಾಬೀತು ಮಾಡಿದ್ದಾರೆ!

ಈಗ ಒಂದು ಸಿಲಿಂಡರು ಮುಗಿದು ಮತ್ತೊಂದನ್ನು ಪಡೆಯಲು ಮೊದಲಿನಂತೆ ಫೋನ್ ಮುಖಾಂತರ ಮಾಡಲು ಆಗುತ್ತಿಲ್ಲ. ಅದಕ್ಕೆ ಆನ್‌ಲೈನ್ ಬುಕಿಂಗ್, ಅದೂ ತಮ್ಮದೇ ಆದ ಮೊಬೈಲ್ ಮುಖಾಂತರವೇ ಮಾಡಬೇಕು. ಅದಕ್ಕೆ ಎಸ್‌ಎಎಸ್ ಮಾಡಬೇಕು.

ಸಾಮಾನ್ಯ ಗೃಹಿಣಿ ಅದರಲ್ಲೂ ಬಡತನದಲ್ಲಿ ಬದುಕುತ್ತಿರುವ ಇಂತಹವರ ಹತ್ತಿರ ಮೊಬೈಲ್, ಕಂಪ್ಯೂಟರ್, ಆನ್‌ಲೈನ್ ಇರಲು ಸಾಧ್ಯವೇ? ಇದ್ದರೂ ಅದನ್ನು ಉಪಯೋಗಿಸಲು ಅವರಿಗೆ ಗೊತ್ತಿರುತ್ತದೆಯೇ? ಇದನ್ನೆಲ್ಲಾ ನೋಡಿದಾಗ ಸರ್ಕಾರ ಪರೋಕ್ಷವಾಗಿ ಮೊಬೈಲ್ ಕಂಪೆನಿಗಳ ಏಜೆಂಟ್ ಆಗಿ ಎಲ್ಲರೂ ಮೊಬೈಲ್ ಕೊಳ್ಳುವಂತೆ, ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳನ್ನು ಕೊಳ್ಳುವಂತೆ ಪ್ರೇರೇಪಿಸುತ್ತಿದೆಯೇ!

ಯಾವುದೇ ಟೆಕ್ನಾಲಜಿಯನ್ನು ಅಳವಡಿಸುವುದಕ್ಕೆ ಮುಂಚೆ ಅದರ ಸಾಧಕ-ಬಾಧಕವನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಇಂತಹ ಅಳವಡಿಕೆಗಳಿಂದ ಜನಸಾಮಾನ್ಯರ ಮೇಲಾಗುವ ಪರಿಣಾಮವನ್ನು, ಆಗುವ ಹಿಂಸೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇನ್ನಾದರೂ ಮಂತ್ರಿಗಳು ನೀರಿಳಿಯದ ಗಂಟಲೊಳಗೆ ಕಡುಬು ತುರುಕಲು ಪ್ರಯತ್ನಿಸದಿರಲಿ.

English summary
Karnataka government has recently adopted Booking of LPG cylinders through mobile SMS system. But can all customers especially lower middle class offer mobile Phones and computers. Isn't government acting as agent for these companies asks Kodagina Seethamma from Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X