'ಕಪಿ'ಲ್ ಕಿತಾಪತಿ: ಸಾಲಿಸಿಟರ್ ಜನರಲ್ ಘನತೆ ಮಣ್ಣು ಪಾಲು

ರಾಜೀನಾಮೆ ನೀಡಿದ ಬೆನ್ನಿಗೆ ಸುಬ್ರಮಣಿಯಂ ಭಾನುವಾರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ತನಗಿಂತ ಕಿರಿಯ ಖಾಸಗಿ ವಕೀಲರೊಬ್ಬರನ್ನು ನೇಮಿಸಿರುವ ಸರಕಾರದ ಕ್ರಮದಿಂದ ಅವಮಾನಿತರಾಗಿ ಸುಬ್ರಮಣಿಯಂ ರಾಜೀನಾಮೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರಕಾರ ವಿಶೇಷ ವಕೀಲರನ್ನು ನೇಮಿಸಿರುವುದು ಅನ್ಯಾಯ. ಖಾಸಗಿ ವಕೀಲರು ನೇಮಕವಾಗಿರುವ ಸಂಗತಿ ತಿಳಿದು ಬಂದಾಗಲೇ ರಾಜೀನಾಮೆ ಕೊಡುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಸುಬ್ರಮಣಿಯಂ ಹೇಳಿದ್ದಾರೆ.
ಪ್ರಧಾನಿ, ಮೊಯ್ಲಿ ಮಧ್ಯಪ್ರವೇಶ: ಸುಬ್ರಮಣಿಯಂ ರಾಜೀನಾಮೆ ವಿವಾದದಲ್ಲಿ ಮಧ್ಯ ಪ್ರವೇಶಿಸಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರಾಜೀನಾಮೆ ನಿರ್ಧಾರವನ್ನು ತಡೆಹಿಡಿಯುವಂತೆ ವಿನಂತಿಸಿದ್ದಾರೆ. ಇದೇ ವೇಳೆ ಕಾನೂನು ಸಚಿವ ವೀರಪ್ಪ ಮೊಯ್ಲಿ ಸಹ ಸುಬ್ರಮಣಿಯಂ ಮೇಲೆ ಒತ್ತಡ ಹೇರಿದ್ದು, ರಾಜೀನಾಮೆ ನೀಡದಂತೆ ಮನವಿ ಮಾಡಿದ್ದಾರೆ.
ಖಾಸಗಿ ವಕೀಲ ರೋಹಿಂಗ್ಟನ್ ನಾರಿಮನ್ ಅವರನ್ನು ತನ್ನ ಪರವಾಗಿ ವಾದಿಸಲು ನೇಮಿಸಬೇಕೆಂದು ಸಿಬಲ್ ಪಟ್ಟು ಹಿಡಿದ ಪರಿಣಾಮವಾಗಿ ಈ ಗಂಭೀರ ಬಿಕ್ಕಟ್ಟು ತಲೆದೋರಿದೆ. ರಿಲಯನ್ಸ್ ಕಮ್ಯುನಿಕೇಶನ್‌ಗೆ ಅನುಕೂಲ ಮಾಡಿಕೊಟ್ಟ ಆರೋಪ ಸಿಬಲ್ ಮೇಲಿದೆ. ಸಿಬಲ್ ವೈಯಕ್ತಿಕ ನೆಲೆಯಲ್ಲಿ ಖಾಸಗಿ ವಕೀಲರನ್ನು ನೇಮಿಸಿಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications